ರಾಮನಗರ:- ಜಿಲ್ಲೆಯಲ್ಲಿ ಗಣೇಶ ಮೂರ್ತಿ ಮೆರವಣಿ ಬಿಜೆಪಿ ಮುಖಂಡ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣ ಬೆಳಕಿಗೆ ಬಂದಿದೆ.
RCB ಫ್ಯಾನ್ಸ್ ಗೆ ಗುಡ್ ನ್ಯೂಸ್: ಈತನಿಗೆ ಕ್ಯಾಪ್ಟನ್ ಪಟ್ಟ ಗ್ಯಾರಂಟಿ!
ಚನ್ನಪಟ್ಟಣ ಗ್ರಾಮಾಂತರ ಬಿಜೆಪಿ ಮಂಡಲದ ಅಧ್ಯಕ್ಷ ಟಿ.ಎಸ್.ರಾಜು ಎನ್ನುವರು ಗಣೇಶನ ಮೆರವಣಿಗೆ ವೇಳೆ ಮಹಿಳೆಯೊಬ್ಬರ ಮೈಕೈ ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ.
ಆರೋಪ ಹಿನ್ನೆಲೆ, ಬಿಜೆಪಿಯಿಂದ ಟಿ.ಎಸ್.ರಾಜುರನ್ನ ಅಮಾನತು ಮಾಡಲಾಗಿದೆ. ಈ ಬಗ್ಗೆ ಸಂತ್ರಸ್ತ ಮಹಿಳೆ ರಾಜು ವಿರುದ್ಧ ಚನ್ನಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಸಿದ್ದಾರೆ.
ಸೆಪ್ಟೆಂಬರ್ 7ರ ರಾತ್ರಿ 11:45 ಸುಮಾರಿಗೆ ಗಣೇಶ ಮೆರವಣಿಗೆ ನೋಡಲು ಮನೆ ಹೊರಗಡೆ ನಿಂತಿದ್ದ ವೇಳೆ ರಾಜು, ಮಹಿಳೆಯನ್ನು ಹಿಂದಿನಿಂದ ಬಂದು ಯಾವಾಗ ಬಂದೆ ಬೇಬಿ ಹೆಗಲ ಮೇಲೆ ಕೈ ಹಾಕಿ, ಬಳಿಕ ಎದೆಗೆ ಕೈ ಹಾಕಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ.