ಕಲಬುರಗಿ: ಗಂಡನ ಕಿರಿಕಿರಿ ಸಾಕಾಗಿದೆ ದಯವಿಟ್ಟು ಬುದ್ಧಿ ಹೇಳಿ.. ಹೀಗಂತ ಕಷ್ಟ ಹೇಳಿಕೊಂಡು ಠಾಣೆಗೆ ಬಂದ ಮಹಿಳೆಗೆ ಪೋಲೀಸ್ ಪೇದೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕಲಬುರಗಿಯಲ್ಲಿ ಕೇಳಿ ಬಂದಿದೆ.. ಕಮಲಾಪುರ ಪೋಲೀಸ್ ಠಾಣೆಯ ಪೇದೆ ಬಸವರಾಜ್ ವಿರುದ್ಧ ಮಹಿಳೆ ಆರೋಪ ಮಾಡಿದ್ದು,
ಇದೀಗ ದೂರು ದಾಖಲಾಗಿದೆ. ಕಷ್ಟ ಹೇಳಲು ಬಂದಾಗ ಸಹಾಯ ಮಾಡುವ ನೆಪದಲ್ಲಿ ಪದೇ ಪದೇ ಫೋನ್ ಮಾಡೋದು ನಂತ್ರ ನನ್ನ ಜೊತೆ ಅಡ್ಜಸ್ಟ್ ಆಗು ನಿನ್ನ ಸಮಸ್ಯೆ ಬಗೆಹರಿಸ್ತೇನೆ.ಹೀಗಂತ ಕಿರುಕುಳ ನೀಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ..