ಬೆಂಗಳೂರು: ಶಿಕ್ಷಕಿಗೆ ಲೈಂಗಿಕ ಕಿರುಕುಳ ಕೊಟ್ಟಿರುವ ಕೆಪಿಸಿಸಿ ಕಾರ್ಯದರ್ಶಿ ಗುರಪ್ಪನಾಯ್ಡು ವಿರುದ್ದ ಚೆನ್ನಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಿಜಿಎಸ್ ಬ್ಲೂಮ್ ಫೀಲ್ಡ್ ಚೇರ್ಮನ್ ಆಗಿರುವ ಗುರಪ್ಪ ನಾಯ್ಡ ತ್ಯಾಗರಾಜನಗರದ ತಮ್ಮ ಖಾಸಗಿ ಶಾಲೆಯ ಶಿಕ್ಷಕಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಮಾಡಲಾಗಿದೆ.
ಅಂಚೆ ಕಚೇರಿಯಲ್ಲಿ “ಪ್ರೀಮಿಯಂ ಉಳಿತಾಯ ಖಾತೆ” ತೆರೆಯುವುದು ಹೇಗೆ.? ಪ್ರಯೋಜನಗಳೇನು.? ಇಲ್ಲಿದೆ ಮಾಹಿತಿ
ಶಾಲೆಯಲ್ಲಿ ಕೆಲಸ ಮಾಡುವ ಕೆಲ ಶಿಕ್ಷಕಿಯರು, ಸಿಬ್ಬಂದಿಗೂ ಕಿರುಕುಳ ನೀಡಲಾಗಿದ್ದು, ಛೇಂಬರ್ಗೆ ಕರೆದು ತನ್ನ ಜತೆ ಸಹಕರಿಸುವಂತೆ ಕೈಹಿಡಿದು ಎಳೆದಾಡಿ ಕೆಟ್ಟ ಪದಗಳಿಂದ ಗುರಪ್ಪನಾಯ್ಡು ನಿಂದಿಸಿರುವುದಾಗಿ ಆರೋಪ ಮಾಡಲಾಗಿದೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.