ವಾಷಿಂಗ್ಟನ್: ಅಮೆರಿಕದ ನೂತನ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಲೇಖಕಿ ಇ.ಜೀನ್ ಕರೋಲ್ ಅವರಿಗೆ ನೀಡಿದ್ದಾರೆ ಎನ್ನಲಾದ ಲೈಂಗಿಕ ಕಿರುಕುಳ ಮತ್ತು ಮಾನಹಾನಿ ಪ್ರಕರಣಗಳಲ್ಲಿ 50 ಲಕ್ಷ ಡಾಲರ್ ದಂಡ ಪಾವತಿಸುವಂತೆ ನ್ಯಾಯಾಧಿಕಾರಿಗಳು ನೀಡಿದ್ದ ತೀರ್ಪನ್ನು ಅಮೆರಿಕದ ಫೆಡರಲ್ ಅಪೀಲ್ಸ್ ಕೋರ್ಟ್ ಎತ್ತಿಹಿಡಿದಿದೆ.
1996ರಿಂದ ಡೊನಾಲ್ಡ್ ಟ್ರಂಪ್ ಅವರು ಕರೋಲ್ ಅವರಿಗೆ ಮ್ಯಾನ್ ಹಾಟನ್ ಡಿಪಾರ್ಟ್ಮೆಂಟ್ ಸ್ಟೋರ್ ನಲ್ಲಿ ಲೈಂಗಿಕ ಕಿರುಕುಳ ನೀಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಕಳೆದ ವರ್ಷ ಒಂಬತ್ತು ದಿನಗಳ ಸಿವಿಲ್ ವಿಚಾರಣೆ ನಡೆಸಿದ ಬಳಿಕ ನ್ಯೂಯಾರ್ಕ್ ನ್ಯಾಯಾಲಯದ ನಿರ್ಣಾಯಕರ ಮಂಡಳಿ ತೀರ್ಪು ನೀಡಿತ್ತು.
ಲೈಂಗಿಕ ಕಿರುಕುಳ ನೀಡಿದ್ದಕ್ಕಾಗಿ 20 ಲಕ್ಷ ಡಾಲರ್ ಮತ್ತು ಎಲ್ಲೆ ಮ್ಯಾಗಝಿನ್ ನ ಅಂಕಣಗಾರ್ತಿ ಕರೋಲ್ ಅವರ ಮಾನಹಾನಿ ಮಾಡಿದ್ದಕ್ಕಾಗಿ 30 ಲಕ್ಷ ಡಾಲರ್ ಪಾವತಿಸುವಂತೆ ತೀರ್ಪು ನೀಡಿತ್ತು. ಆದ್ರೆ ಈ ಆರೋಪಗಳನ್ನು ಅಲ್ಲಗಳೆದಿದ್ದ ಟ್ರಂಪ್ ತಮಗೂ ಲೈಂಗಿಕ ಕಿರುಕುಳ ನೀಡಿದ್ದರು ಹಾಗೂ ತಮಗೆ ಸಾಕ್ಷಿ ಹೇಳಲು ಅವಕಾಶ ನೀಡಿರಲಿಲ್ಲ ಎಂಬ ಆಧಾರದಲ್ಲಿ ತೀರ್ಪನ್ನು ಟ್ರಂಪ್ ಪ್ರಶ್ನಿಸಿದ್ದರು.