ಬೆಂಗಳೂರು: ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಒಳಗೊಂಡ ದೃಶ್ಯಗಳನ್ನು ಪೆನ್ ಡ್ರೈವ್ ನಲ್ಲಿ ಕಾಪಿ ಮಾಡಿ ವಿತರಿಸುವುದು ಅತ್ಯಂತ ಅಪಾಯಕಾರಿ ಮತ್ತು ಪಾಪದ ಕೆಲಸ ಎಂದು ಹೈಕೋರ್ಟ್ ಬೇಸರ ವ್ಯಕ್ತಪಡಿಸಿದೆ.ಇಂತಹ ವಿಚಾರಗಳಲ್ಲಿ ಪುರುಷ ಏನೂ ಕಳೆದುಕೊಳ್ಳುವುದಿಲ್ಲ. ಆದರೆ, ಮಹಿಳೆಯನ್ನು ಮಂದ ಬೆಳಕಿನಲ್ಲಿ ಕೆಟ್ಟದಾಗಿ ಚಿತ್ರಿಸುವುದರಿಂದ ಆಕೆ ಅಪಮಾನಕ್ಕೆ ಒಳಗಾಗುತ್ತಾಳೆ ಎಂದು ಮೌಖಿಕವಾಗಿ ಹೇಳಿದೆ.
ಇದೇ ವೇಳೆ ನ್ಯಾಯಾಲಯ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ ಪೆನ್ಡ್ರೈವ್ ವಿತರಣೆ ಸಂಬಂಧ ಪ್ರಮುಖ ಆರೋಪಿ ಎನ್ನಲಾದ ಶರತ್ ಎಂಬುವವರ ವಿರುದ್ಧದ ಪ್ರಕರಣ ರದ್ದುಗೊಳಿಸುವ ವಿಚಾರದಲ್ಲಿ ಮಧ್ಯಪ್ರವೇಶಕ್ಕೆ ನಿರಾಕರಿಸಿದೆ.
Causes Of Snoring: ಸಿಕ್ಕಾಪಟ್ಟೆ ಗೊರಕೆ ಹೊಡೆಯುತ್ತೀರಾ.? ಹಾಗಾದ್ರೆ ಇದೇ ನೋಡಿ ಕಾರಣ.?
ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಒಳಗೊಂಡಿದ್ದಾರೆಂದು ಆರೋಪಿಸಲಾದ ಲೈಂಗಿಕ ದೌರ್ಜನ್ಯದ ಪೆನ್ಡ್ರೈವ್ಗಳ ಕಾಪಿ ಮಾಡುವುದು ಮತ್ತು ವಿತರಣೆ ವಿಚಾರದ ಪ್ರಮುಖ ಆರೋಪಿ ಶರತ್ ತಮ್ಮ ವಿರುದ್ಧದ ಪ್ರಕರಣಕ್ಕೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ವಿಚಾರಣೆ ನಡೆಸಿತು.