ಮಂಡ್ಯ: ಒಂದೇ ಶಾಲೆಯ ಹತ್ತಾರು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ಕಿರುಕುಳ ನೀಡಿರುವ ಆರೋಪದಡಿ ಶಾಲೆಯ ಹಳೆಯ ವಿದ್ಯಾರ್ಥಿ ಮೇಲೆ ಪ್ರಕರಣ ದಾಖಲಿದ್ದು ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಯೋಗಿ ಎಂಬ ಹಳೇ ವಿದ್ಯಾರ್ಥಿ ತನ್ನ ಶಾಲೆಯ ಮಕ್ಕಳಿಗೆ ಚಿತ್ರಕಲೆ, ಕ್ರೀಡೆ ಹೇಳಿಕೊಡುವ ನೆಪದಲ್ಲಿ ಮಕ್ಕಳನ್ನು ಬಳಸಿಕೊಂಡು ಹೀನ ಕೃತ್ಯ ಎಸಗಿದ್ದಾನೆ. ಅಣ್ಣನಂತೆ ನಂಬಿಸಿ ಅಪ್ರಾಪ್ತ ವಿದ್ಯಾರ್ಥಿನಿಯರ ನಗ್ನ ಫೋಟೋ ತೆಗೆದು ಬ್ಲಾಕ್ ಮೇಲ್ ಮಾಡಿದ್ದಾನೆ.
ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಮೇಲುಕೋಟೆ ಠಾಣಾ ವ್ಯಾಪ್ತಿಯ ಸರ್ಕಾರಿ ಪ್ರೌಢ ಶಾಲೆಯೊಂದರ ಹಲವು ಅಪ್ರಾಪ್ತ ಬಾಲಕಿಯರಿಗೆ ಆರೋಪಿ ಯೋಗಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಸದ್ಯ ನೊಂದ ನಾಲ್ವರು ಬಾಲಕಿಯರು ಘಟನೆ ಸಂಬಂಧ ದೂರು ನೀಡಿದ್ದು ದೂರಿನನ್ವಯ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಮೇಲುಕೋಟೆ ಪೊಲೀಸರು ಎಫ್ಐಆರ್ ದಾಖಲಿಸಿ ಯೋಗಿಯನ್ನು ಬಂಧಿಸಿ ಜೈಲಿಗೆ ತಳ್ಳಿದ್ದಾರೆ. ಕ್ರೀಡೆ ಹೇಳಿಕೊಡುವ ನೆಪದಲ್ಲಿ ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ.
ವಾಟ್ಸಪ್ ಸ್ಕ್ರೀನ್ ಶಾಟ್ ಗಳನ್ನು ಸಾಕ್ಷ್ಯವಾಗಿ ಪರಿಗಣಿಸಲು ಸಾಧ್ಯವಿಲ್ಲ: ಹೈಕೋರ್ಟ್ʼನಿಂದ ಮಹತ್ವದ ತೀರ್ಪು
ವಿದ್ಯಾರ್ಥಿನಿಯರು ಬಟ್ಟೆ ಬದಲಿಸುವಾಗ ನಗ್ನ ಫೋಟೋ ತೆಗೆದು ಅವುಗಳನ್ನ ಹೆತ್ತವರಿಗೆ ಕಳುಹಿಸುವುದಾಗಿ ಬೆದರಿಸಿ ದೌರ್ಜನ್ಯ ಎಸಗುತ್ತಿದ್ದ. ಕಿರಾತಕನ ದೌರ್ಜನ್ಯದಿಂದ ಬೇಸತ್ತ ಮಕ್ಕಳು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳಿಗೆ ಪತ್ರ ಬರೆದಿದ್ದು ವಿದ್ಯಾರ್ಥಿನಿಯರ ಪತ್ರ ನೋಡಿ ಶಾಲೆಗೆ ತೆರಳಿ ವಿಚಾರಿಸಿದಾಗ ಘೋರ ಕೃತ್ಯ ಬೆಳಕಿಗೆ ಬಂದಿದೆ. ಒಂದೇ ಶಾಲೆಯ ಹಲವು ವಿದ್ಯಾರ್ಥಿನಿಯರಿಗೆ ಬ್ಲಾಕ್ ಮೇಲ್ ಮಾಡಿ ಲೈಂಗಿಕ ಕಿರುಕುಳ ನೀಡಿರುವುದು ಪತ್ತೆಯಾಗಿದೆ. ಪೋಕ್ಸೋ ಜೊತೆಗೆ ಐಪಿಸಿ ಸೆಕ್ಸನ್ 354 A, 354 D, 509 ರಿತ್ಯ ಕೇಸ್ ದಾಖಲಿಸಲಾಗಿದೆ.