ಐಶ್ವರ್ಯಾ ರೈ ಅಂದರೆ, ಸೌಂದರ್ಯ. ಸೌಂದರ್ಯ ಅಂದರೆ ಐಶ್ವರ್ಯಾ ರೈ ಅನ್ನುವ ವಾದವಿದೆ. ಒಂದು ಕಾಲದಲ್ಲಿ ಆಕೆಯ ಅಭಿಮಾನಿಗಳು ಮಾಜಿ ವಿಶ್ವ ಸುಂದರಿ ಅನ್ನುವ ಮಾತನ್ನೇ ಒಪ್ಪಿಕೊಳ್ಳುತ್ತಿರಲಿಲ್ಲ. ಐಶ್ವರ್ಯಾ ರೈ ಎವರ್ಗ್ರೀನ್ ಬ್ಯೂಟಿ ಅನ್ನುವುದು ಅವರ ವಾದವಾಗಿತ್ತು.
ನಿಮಗೆ ಎಷ್ಟೇ ಇಷ್ಟ ಇದ್ರೂ ಪರವಾಗಿಲ್ಲಾ, ಈ ಕಾಯಿಲೆ ಇದ್ರೆ ಪಪ್ಪಾಯಿ ಸೇವನೆ ಬಿಟ್ಟುಬಿಡಿ!
ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಪ್ರತಿ ದಿನ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗಂತೂ ಐಶ್ವರ್ಯಾ ರೈ ಕೌಟುಂಬಿಕ ಬದುಕಿನ ಬಗ್ಗೆ ಚರ್ಚೆಯಲ್ಲಿದ್ದಾರೆ. ಪತಿ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ನಡುವಿನ ದಾಂಪತ್ಯದಲ್ಲಿ ಬಿರುಕು ಬಿಟ್ಟಿದೆ ಅನ್ನೋ ಸುದ್ದಿ ಹಲವು ದಿನಗಳಿಂದ ಹರಿದಾಡುತ್ತಿದೆ.
ಬಾಲಿವುಡ್ ಉದ್ಯಮದಲ್ಲಿ ಬುದ್ಧಿವಂತ ಸುಂದರಿ ಎಂದು ಕರೆಯಲ್ಪಡುವ ನಟಿ ಐಶ್ವರ್ಯಾ ರೈ, ಬಾಲಿವುಡ್ನಲ್ಲಿ ಮಾತ್ರವಲ್ಲದೆ ವಿಶ್ವದಲ್ಲೂ ತಮ್ಮ ವಿಶೇಷ ಗುರುತನ್ನು ಮೂಡಿಸಿದ್ದಾರೆ. ಐಶ್ವರ್ಯಾ ರೈ ಅವರ ಹೆಸರು ವಿಶ್ವದ ಅಗ್ರ ನಟಿಯರಲ್ಲಿ ಸೇರಿದೆ. 1997ರ ‘ಪ್ಯಾರ್ ಹೋ ಗಯಾ’ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ ಐಶ್ವರ್ಯಾ ರೈ, 27 ವರ್ಷಗಳಿಗೂ ಹೆಚ್ಚು ಕಾಲ ಚಲನಚಿತ್ರ ಕೆರಿಯರ್ನಲ್ಲಿ ಇದ್ದಾರೆ. ಈಗ ಚಲನಚಿತ್ರಗಳಲ್ಲಿ ನಟಿಸುವುದು ವಿರಳವಾಗಿದ್ದರೂ, ಪ್ರತಿ ವರ್ಷ ಕೋಟ್ಯಂತರ ರೂಪಾಯಿ ಜಾಹಿರಾತು ಮತ್ತಿತರೆಡೆಗಳಿಂದ ಗಳಿಸುತ್ತಾರೆ. ಐಶ್ವರ್ಯಾ ಅವರ ಬುದ್ಧಿವಂತಿಕೆ, ಸ್ಮಾರ್ಟ್ನೆಸ್ ಬಗ್ಗೆ ಹಲವು ಕತೆಗಳಿವೆ. ಸಂಕೀರ್ಣವಾದ ಪ್ರಶ್ನೆಗಳಿಗೆ ಸಹ ಅವರು ತುಂಬಾ ಸುಂದರವಾಗಿ ಉತ್ತರಿಸುತ್ತಾರೆ. ದಿ ಓಪ್ರಾ ವಿನ್ಫ್ರೇ ಶೋನಲ್ಲಿ ಅವರನ್ನು ಕೇಳಿದ ಅಂತಹ ಒಂದು ವಿವಾದಾತ್ಮಕ ಪ್ರಶ್ನೆಗೆ ಬಹಳ ಆಕರ್ಷಕವಾಗಿ ಐಶ್ ಉತ್ತರಿಸಿದರು.
ಭಾರತದಲ್ಲಿ ಪ್ರೀತಿ ಮತ್ತು ವಾತ್ಸಲ್ಯವನ್ನು ಏಕೆ ಸಾರ್ವಜನಿಕವಾಗಿ ತೋರಿಸುವುದಿಲ್ಲ ಎಂಬ ಪ್ರಶ್ನೆಯನ್ನು ಐಶ್ವರ್ಯಾ ಅವರಿಗೆ ಕೇಳಲಾಯಿತು. ಹೌದು, ಇದು ಭಾರತದಲ್ಲಿ ಸಾಮಾನ್ಯವಾಗಿ ಸಾರ್ವಜನಿಕವಾಗಿ ನೋಡಲಾಗದ ಅಥವಾ ಮಾಡಲಾಗದ ವಿಷಯ. ಆದರೆ ಇದು ತೀರ ಖಾಸಗಿ ಭಾವನೆ. ಜನರು ಬೀದಿಗಳಲ್ಲಿ ಚುಂಬಿಸುವುದನ್ನು ನೀವು ನಮ್ಮಲ್ಲಿ ನೋಡುವುದಿಲ್ಲ. ಕಲೆ ಜೀವನವನ್ನು ಪ್ರತಿಬಿಂಬಿಸುತ್ತದೆ ಮತ್ತು ಹೀಗಾಗಿ ಹಿಂದಿ ಸಿನಿಮಾ ಕೂಡ ಅದನ್ನು ಅದೇ ರೀತಿಯಲ್ಲಿ ತೋರಿಸುತ್ತದೆ ಎಂದರು ಐಶ್
ಐಶ್ವರ್ಯಾ ಅವರನ್ನು, ಭಾರತದಲ್ಲಿ ಮದುವೆಗೆ ಮುನ್ನ ದೈಹಿಕ ಸಂಬಂಧ ಹೊಂದುವುದನ್ನು ನಿಷಿದ್ಧವೆಂದು ತೋರಿಸಲಾಗುತ್ತದಲ್ಲಾ ಯಾಕೆ ಎಂದು ಕೇಳಲಾಯಿತು. ಇದರ ಬಗ್ಗೆಯೂ ಐಶ್ ಪ್ರಬುದ್ಧವಾಗಿ ಉತ್ತರಿಸಿದಳು. ಭಾರತೀಯ ಸಂಸ್ಕೃತಿಯನ್ನು ವಿವರಿಸಿದಳು. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಅದು ವೈವಾಹಿಕ ಜೀವನಕ್ಕೆ ಒಳ್ಳೆಯದಲ್ಲ ಎಂದಳು. ಭಾರತೀಯ ಸಮಾಜದಲ್ಲಿ ಜನ ಕುಟುಂಬಕ್ಕೆ ಪ್ರಾಮುಖ್ಯತೆ ನೀಡುತ್ತಾರೆ. ಇದು ಈ ದೇಶದ ವಿಶೇಷತೆ. ಕುಟುಂಬದೊಂದಿಗೆ ವಾಸಿಸುವುದು ಮತ್ತು ಪರಸ್ಪರ ಸಂಪರ್ಕದಲ್ಲಿರುವುದು ತುಂಬಾ ಒಳ್ಳೆಯದು ಎಂದು ಜನ ಭಾವಿಸುತ್ತಾರೆ ಎಂದರು.
ಇನ್ನೂ ಅಭಿಷೇಕ್ ಬಚ್ಚನ್ ಜೊತೆಗೆ ಮದುವೆಗೆ ಮೊದಲು ಐಶ್ವರ್ಯಾ ಅವರ ಹೆಸರು ಇತರ ಹಲವು ನಟರೊಂದಿಗೆ ಸಂಬಂಧ ಹೊಂದಿತ್ತು. ಐಶ್ವರ್ಯಾ ಸಲ್ಮಾನ್ ಖಾನ್ ಅವರೊಂದಿಗೆ ಹೆಚ್ಚು ಸುದ್ದಿಯಲ್ಲಿದ್ದಳು. ಆದರೆ ಈ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ. ಸಲ್ಮಾನ್ ಜೊತೆಗಿನ ಬ್ರೇಕಪ್ ನಂತರ, ಐಶ್ ತುಸು ಕಾಲ ಖಿನ್ನರಾದರು. ಒಂಟಿತನ ಅನುಭವಿಸಿದರು. ಆ ಸಮಯದಲ್ಲಿ ವಿವೇಕ್ ಒಬೆರಾಯ್ ಅವಳಜೊತೆಗಿದ್ದ. ನಂತರ ಈ ಇಬ್ಬರೂ ಸಹ ಬೇರ್ಪಟ್ಟರು.