ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಎದುರಾಗಿರುವ ತೀವ್ರ ನೀರಿನ ಸಮಸ್ಯೆಯ ನಡುವೆ ಬೆಂಗಳೂರಿನ ಮನೆ ಮಾಲೀಕರು ಆತಂಕ ವ್ಯಕ್ತಪಡಿಸಿದ್ದಾರೆ.
ಕುಡಿಯುವ ನೀರನ್ನು ಅನವಶ್ಯಕ ಉದ್ದೇಶಗಳಿಗೆ ಬಳಸಿದವರಿಗೆ BWSSB 5,000 ರೂ ದಂಡವನ್ನು ವಿಧಿಸುತ್ತಿದೆ. ಆದರೆ ಕುಡಿಯುವ ನೀರು ಬಿಟ್ಟು ಇತರೆ ಬಳಕೆಗೆ ನೀರು ಸಿಗುತ್ತಿಲ್ಲ. ನೀರಿನ ಪರ್ಯಾಯ ಮೂಲಗಳಿಲ್ಲದ ಕಾರಣ ನಿವಾಸಿಗಳು ಚಿಂತಿಸುವಂತಾಗಿದೆ. ಮತ್ತು BWSSB ಆದೇಶವನ್ನು ಉಲ್ಲಂಘಿಸಿ 5,000 ರೂ ದಂಡವನ್ನು ಪಾವತಿಸಬೇಕಾಗುವಂತಹ ಪರಿಸ್ಥಿತಿ ಎದುರಾಗುತ್ತಿದೆ. BWSSB ಆದೇಶದ ಪ್ರಕಾರ, ಕುಡಿಯುವ ನೀರನ್ನು ಕಾರುಗಳನ್ನು ತೊಳೆಯುವುದು ಅಥವಾ ಸಸ್ಯಗಳಿಗೆ ನೀರು ಹಾಕುವುದು ಮುಂತಾದ ಅನವಶ್ಯಕ ಉದ್ದೇಶಗಳಿಗೆ ಬಳಸಬಾರದು ಎಂದು ಆದೇಶ ನೀಡಿದೆ. ಅಪಾರ್ಟ್ಮೆಂಟ್ಗಳಲ್ಲಿ ವಾಸಿಸುವ ಜನರು ಕೊಳಚೆ ನೀರಿನ ಸಂಸ್ಕರಣಾ ಘಟಕದಿಂದ ಇತರೆ ಬಳಕೆಗೆ ನೀರನ್ನು ಪಡೆಯುತ್ತಾರೆ. ಆದರೆ ಮನೆಗಳಲ್ಲಿ ವಾಸಿಸುವ ಜನರಿಗೆ ಅಂತಹ ಆಯ್ಕೆಗಳಿಲ್ಲ.
Lok Sabha Elections 2024: ಪ್ರಧಾನಿ ಮೋದಿ ಕರ್ನಾಟಕ ಭೇಟಿಗೆ ದಿನಾಂಕ ಫಿಕ್ಸ್: ಈ ಕ್ಷೇತ್ರಗಳೇ ಬಿಗ್ ಟಾರ್ಗೆಟ್!
ದೊಡ್ಡ ಬೊಮ್ಮಸಂದ್ರದ ನಿವಾಸಿಯೊಬ್ಬರು ತಮ್ಮ ಮನೆಯಲ್ಲಿ ಕಾವೇರಿ ನೀರಿನ ಸಂಪರ್ಕ ಮಾತ್ರ ಹೊಂದಿದ್ದು ಬೇರೆ ದಾರಿಯಿಲ್ಲದ ಕಾರಣ ತಮ್ಮ ತೋಟಕ್ಕೆ ಅದೇ ಕುಡಿಯುವ ನೀರನ್ನು ಬಳಸುತ್ತಿದ್ದಾರೆ. ನನಗೆ ಬೇರೆ ಮಾರ್ಗವಿಲ್ಲದೆ ನನ್ನ ತೋಟಕ್ಕೆ ಕುಡಿಯುವ ನೀರನ್ನೇ ಬಳಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಅಂತರ್ಜಲವು ಸಾಮಾನ್ಯ ಸಂಪನ್ಮೂಲವಾಗಿರುವುದರಿಂದ, ನಮ್ಮ ಬಡಾವಣೆಯಲ್ಲಿ ದಶಕಗಳ ಹಿಂದೆ ನಾವು ಮನೆಗಳನ್ನು ನಿರ್ಮಿಸುವಾಗ ಪ್ರತ್ಯೇಕ ಬೋರ್ವೆಲ್ಗಳನ್ನು ಕೊರೆಯದಿರಲು ನಿರ್ಧರಿಸಿದ್ದೇವೆ. ನಮ್ಮ ಮನೆಗೆ ಕಾವೇರಿ ನೀರು ಮಾತ್ರ ಸಿಗುತ್ತದೆ. ಬೆಂಗಳೂರಿನ ಎಲ್ಲಾ ಮನೆಗಳಂತೆ ನಮ್ಮಲ್ಲೂ ಒಂದು ಚಿಕ್ಕ ತೋಟವಿದೆ, ಅದು ನೀರಿಲ್ಲದೆ ಈ ಬೇಸಿಗೆಯಲ್ಲಿ ಒಣಗುತ್ತಿದೆ. ಹೀಗಾಗಿ, ನೀರಿನ ಬಳಕೆಯ ಬಗ್ಗೆ ಜಾಗೃತರಾಗಿ, ನಾವು ನಮ್ಮ ಸಸ್ಯಗಳಿಗೆ ಬೇಕಾಗುವಷ್ಟು ಕಾವೇರಿ ನೀರನ್ನು ಬಳಸುತ್ತಿದ್ದೇನೆ ಎಂದು ಹೇಳಿದರು.