ಕಲಬುರಗಿ: ಭೀಕರ ಬರಗಾಲಕ್ಕೆ ತುತ್ತಾಗಿರುವ ಬಿಸಿಲೂರು ಕಲಬುರಗಿಗೆ ನಾಳೆ ನವೆಂಬರ್ 7 ರಂದು ಬಿವೈ ವಿಜಯೇಂದ್ರ ನೇತ್ರತ್ವದ ಬಿಜೆಪಿ ತಂಡ ಭೇಟಿ ನೀಡಲಿದೆ.. ಗ್ರಾಮೀಣ ಮತಕ್ಷೇತ್ರದ ಪಟ್ನಾ ಜೇವರ್ಗಿ ಕ್ಷೇತ್ರದ ಸೊನ್ನ ಹಾಗು ಅಫಜಲಪುರ ಕ್ಷೇತ್ರದ ಫರ್ತಾಬಾದ್ ಗ್ರಾಮದಲ್ಲಿ ತಂಡ ಸಂಚರಿಸಲಿದೆ.ರೈತರೊಡನೆ ಸಂವಾದ ನಡೆಸಿ ಮಾಹಿತಿ ಸಂಗ್ರಹಿಸಲಿದೆ.
ಮಾತ್ರವಲ್ಲ ಹೊಲಗಳಿಗೆ ಭೇಟಿ ಕೊಟ್ಟು ಅಧ್ಯಯನ ನಡೆಸಿ ಸರ್ಕಾರದ ಗಮನ ಸೆಳೆಯಲು ತಂಡ ಸಜ್ಜಾಗಿದೆ..ಬಿಜೆಪಿಯ ಈ ತಂಡದಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ಕಲಬುರಗಿ ಸಂಸದ ಉಮೇಶ್ ಜಾಧವ್ ಹಾಗು ಹಾಲಿ & ಮಾಜಿ ಶಾಸಕರು ಇರಲಿದ್ದಾರೆ ಅಂತ ಬಿಜೆಪಿಯ ರಾಜ್ಯ ವಕ್ತಾರ ಹಾಗು ಮಾಛಿ ಶಾಸಕ ರಾಜಕುಮಾರ್ ಪಾಟೀಲ್ ತೆಲ್ಕೂರ್ ತಿಳಿಸಿದ್ದಾರೆ…