ಚಿಕ್ಕಬಳ್ಳಾಪುರ : ಬರೋಬ್ಬರಿ 40 ಕ್ಕೂ ಹೆಚ್ಚು ಮನೆಗಳ್ಳತನ, 20ಕ್ಕೂ ಹೆಚ್ಚು ಕಿಡ್ಯ್ನಾಪ್, 5 ಕೊಲೆ ಕೇಸ್ ಸೇರಿದಂತೆ ಹಲವು ಪ್ರಕರಣಗಳಲ್ಲಿ ಬೇಕಾಗಿರುವ ಮೋಸ್ಟ್ ವಾಂಟೆಂಡ್ ಬಾಂಬೆ ಸಲೀಂ ಸೇರಿದಂತೆ 7 ಆರೋಪಿಗಳನ್ನು ಬಂಧಿಸುವಲ್ಲಿ ಬಾಗೇಪಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಾಂಬೆ ಸಲೀಂ ಜೊತೆ ಆಂಧ್ರಪ್ರದೇಶದ ಚಿಲಮತ್ತೂರಿನ ಅನಿಲ್, ರಾಜಾನುಕುಂಟೆಯ ಚೇತನ್, ರಾಜಾನುಕುಂಟೆಯ ರೌಡಿಶೀಟರ್ ನಾಗೇಶ್, ಬಾಗೇಪಲ್ಲಿಯ ರೌಡಿಶೀಟರ್ ಚೇತನ್, ಗುಡಿಬಂಡೆಯ ರೌಡಿಶೀಟರ್ ಬಾಬುರೆಡ್ಡಿ, ಬೆಂಗಳೂರಿನ ರೌಡಿಶೀಟರ್ ವಾಸಿಮ್ ಹಾಗೂ ಅಸ್ಲಾಂ ಎಂಬುವವರನ್ನ ಕೇರಳದಲ್ಲಿ ಬಂಧಿಸಲಾಗಿದೆ. ಬಂಧಿತರರಿಂದ ಒಂದು ಕಾರು, ಮೂರು ಬೈಕ್ ಹಾಗೂ 5 ಲಕ್ಷ ನಗದನ್ನು ವಶಕ್ಕೆ ಪಡೆಯಲಾಗಿದೆ.
2024ರ ಡಿ.20 ರಂದು ಗುಡಿಬಂಡೆ ತಾಲೂಕಿನ ಗಂಗಾನಹಳ್ಳಿ ಗ್ರಾಮದ ಅಶ್ವತ್ಥನಾರಾಯಣಸ್ವಾಮಿ ಎಂಬಾತನ ಕಿಡ್ಯ್ನಾಪ್ ಮಾಡಲಾಗಿತ್ತು. ಆ ವೇಳೆ ಕಾರಿನಲ್ಲಿದ್ದ 16 ಲಕ್ಷ ರೂ. ಹಣ ದೋಚಿದ್ದರು. ಅಲ್ಲದೇ ಬಾಂಬೆ ಸಲೀಂ ಮತ್ತು ಅವನ ಗ್ಯಾಂಗ್ ಅಶ್ವತ್ಥನಾರಾಯಣಸ್ವಾಮಿ ಹೆಂಡತಿಗೆ ಕರೆ ಮಾಡಿ 50 ಲಕ್ಷ ರೂ. ಬೇಡಿಕೆ ಇಟ್ಟಿದ್ದರು. ಇದೀಗ ಕಾರ್ಯಾಚರಣೆ ನಡೆಸಿರುವ ಪೊಲೀಸರು ಆತನನ್ನು ಬಂಧಿಸಿದ್ಧಾರೆ. ಸದ್ಯ ಬಾಂಬೆ ಸಲೀಂ ಆ್ಯಂಡ್ ಗ್ಯಾಂಗ್ನ ಬೆಂಗಳೂರಿನ ಪರಪ್ಪನ ಆಗ್ರಹಾರ ಜೈಲಿಗೆ ಅಟ್ಟಲಾಗಿದೆ.