ಕಲಬುರಗಿ: ರಾಜ್ಯದ ಎಲ್ಲಾ ಭಾಗಗಳಲ್ಲಿ ಸರ್ಕಾರ ಪ್ರತಿಷ್ಠಾನಗಳನ್ನ ಸ್ಥಾಪಿಸಿ ಆ ಪ್ರತಿಷ್ಠಾನಕ್ಕೆ ಅಧ್ಯಕ್ಷ ಮತ್ತು ಸದಷ್ಯರನ್ನ ನೇಮಕ ಮಾಡಿ ಕಲ್ಯಾಣ ಕರ್ನಾಟಕಕ್ಕೆ ಮಾತ್ರ ನಿರ್ಲಕ್ಷ ಮಾಡಿದೆ ಅಂತ ಸಾಹಿತಿ ಸ್ವಾಮಿರಾವ್ ಕುಲಕರ್ಣಿ ಹೇಳಿದ್ದಾರೆ.. ಕಲಬುರಗಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸ್ವಾಮಿರಾವ್ ಈಗಾಗಲೇ ಬೆಂಗಳೂರು, ಬಾಗಲಕೋಟೆ,
ಹಾವೇರಿ ಸೇರಿದಂತೆ 26 ಜಿಲ್ಲೆಗಳಲ್ಲಿ ಪ್ರತಿಷ್ಠಾನಗಳಿವೆ ಆದ್ರೆ ಕಲಬುರಗಿ ಸೇರಿದಂತೆ ಕಲ್ಯಾಣ ಭಾಗಕ್ಕೆ ಮಾತ್ರ ಸರ್ಕಾರ ಕಡೆಗಣನೆ ಮಾಡಿದೆ.ಕಲ್ಯಾಣದಲ್ಲಿಯೂ ಸಾಹಿತಿಗಳು ಕಲಾವಿದರೂ ಬಹಳಷ್ಟು ಜನ ಇದ್ದಾರೆ ಹೀಗಾಗಿ ದಿವಂಗತ ಚನ್ನಣ್ಣ ವಾಲೀಕಾರ್ ಹೆಸರಲ್ಲಿ ಕಲಬುರಗಿಯಲ್ಲೊಂದು ಪ್ರತಿಷ್ಠಾನ ಸ್ಥಾಪನೆ ಮಾಡಿ ಅಂತ ಸರ್ಕಾರದ ಬಳಿ ನಿಯೋಗ ತೆಗೆದುಕೊಂಡು ಹೋಗುವ ಕೆಲಸ ಮಾಡ್ತೇವೆ ಅಂತ ಸುರಪುರ ಪ್ರಕಾಶನ ಹಾಗು ರಂಗಸಂಗಮ ಕಲಾ ವೇದಿಕೆ ತಿಳಿಸಿದೆ.