ಇಂದು ಮಧ್ಯಾಹ್ನ ‘X’ ನಲ್ಲಿ ಸರ್ವರ್ ಸಮಸ್ಯೆ ಕಂಡು ಬಂದಿದ್ದು, ಭಾರತ ಸೇರಿ ಜಾಗತಿಕ ಮಟ್ಟದಲ್ಲಿ ಸಾಮಾಜಿಕ ಮಾಧ್ಯಮ ಕೈಕೊಟ್ಟಿದೆ.
ಭಾರತ, ಅಮೆರಿಕ, ಯುಕೆ ಸೇರಿದಂತೆ ಜಾಗತಿಕವಾಗಿ ಸಾಮಾಜಿಕ ಮಾಧ್ಯಮ ಎಕ್ಸ್ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಆ್ಯಪ್ಗೆ ಲಾಗ್ಇನ್ ಆಗಲು ಅಥವಾ ಹೊಸ ವಿಚಾರಗಳು ಲೋಡ್ ಆಗದೇ ಬಳಕೆದಾರರು ಪರದಾಡಿದರು. ಆದ್ರೆ ಬಗ್ಗೆ ಕಂಪನಿಯಾಗಲಿ, ಕಂಪನಿ ಮುಖ್ಯಸ್ಥರಾಗಲಿ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇಂದು ಮಧ್ಯಾಹ್ನ 3:15ರ ಹೊತ್ತಿಗೆ ಡೌನ್ ಡಿಟೆಕ್ಟರ್ನಲ್ಲಿ ಭಾರತದಲ್ಲಿ 2,000ಕ್ಕೂ ಹೆಚ್ಚು ಸೇರಿ ಜಾಗತಿಕವಾಗು 21,000ಕ್ಕೂ ಹೆಚ್ಚು ದೂರುಗಳು ಬಂದಿವೆ ಎಂದು ವರದಿಯಾಗಿದೆ. ಸ್ಥಗಿತಗೊಂಡ ಕನಿಷ್ಠ 30-40 ನಿಮಿಷಗಳ ಬಳಿಕ ಕೆಲವು ಬಳಕೆದಾರರಿಗೆ ಇದು ಕೆಲಸ ಮಾಡಲು ಪ್ರಾರಂಭಿಸಿದೆ ಎಂದು ಪ್ಲಾಟ್ಫಾರ್ಮ್ ಸ್ಥಗಿತ ಟ್ರ್ಯಾಕಿಂಗ್ ವೇದಿಕೆ ತಿಳಿಸಿದೆ.