ಬೆಂಗಳೂರು: ಇಂಡಿಗೋ ಏರ್ಲೈನ್ಸ್ನಲ್ಲಿ ಸರ್ವರ್ ಸಮಸ್ಯೆಯಿಂದ ಪ್ರಯಾಣಿಕರ ಪರದಾಟ ಅನುಭವಿಸುವಂತಿದ್ದು ಚೆಕ್ ಇನ್ ಮತ್ತು ಚೆಕ್ ಔಟ್ ಆಗಲು ಪ್ರಯಾಣಿಕರ ಪರದಾಟ.
ಟರ್ಮಿನಲ್ 1ರಲ್ಲಿ ನೂರಾರು ಜನ ಪ್ರಯಾಣಿಕರು ಸರತಿ ಸಾಲಿನಲ್ಲಿ ನಿಲ್ಲುವಂತಾಗಿದೆ. ಚೆಕ್ಇನ್ ಸಮಸ್ಯೆ ಹಿನ್ನೆಲೆ ವಿಮಾನಗಳ ಟೇಕಾಫ್ನಲ್ಲೂ ವಿಳಂಬವಾಗಿದ್ದು, ಏರ್ಲೈನ್ಸ್ ಸಿಬ್ಬಂದಿಗಳು ಕೆಲ ವಿಮಾನಗಳನ್ನು ರಿ ಶೆಡ್ಯೂಲ್ ಮಾಡಿದ್ದಾರೆ. ಬೆಳಗ್ಗೆ 11 ಗಂಟೆಯಿಂದ ಸರ್ವರ್ ಸಮಸ್ಯೆ ಮುಂದುವರೆದಿದ್ದು, ಸಮಯಕ್ಕೆ ಸರಿಯಾಗಿ ಪ್ರಯಾಣ ಮಾಡಲಾಗದೆ ಪ್ರಯಾಣಿಕರು ಕಂಗಾಲಾಗಿದ್ದಾರೆ.
ನಾಲ್ಕು ಗಂಟೆಗಳ ಕಾಲ ಸರ್ವರ್ ಸಮಸ್ಯೆಯಿಂದ ಕಂಗಾಲಾಗಿದ್ದರು. ಇಂಡಿಗೋ, ಆಕಾಶ್, ಸ್ಪೈಸ್ ಜೆಟ್ ಮತ್ತು ಏರ್ ಇಂಡಿಯಾ ಏಕ್ಸಪ್ರೇಸ್ ಏರ್ಲೈನ್ಸ್ ಸಂಸ್ಥೆಗಳಲ್ಲಿ ಈ ತೊಂದರೆ ಉಂಟಾಗಿತ್ತು. ಪ್ರಯಾಣಿಕರ ಅನುಕೂಲಕ್ಕಾಗಿ ಸಿಬ್ಬಂದಿಗಳು ಮ್ಯಾನುವಲ್ ಚೆಕ್ ಇನ್ ಮಾಡಿಸುತ್ತಿದ್ದಾರೆ. ಮ್ಯಾನುವಲ್ ಚೆಕಿಂಗ್ನಿಂದ ಪ್ರಯಾಣಿಕರು ಕ್ಯೂನಲ್ಲಿ ನಿಲ್ಲುವಂತಾಗಿತ್ತು. ಇದೀಗ ಬೆಳಗ್ಗೆ 11 ಗಂಟೆಯಿಂದ ಸರ್ವರ್ ಸಮಸ್ಯೆ ಮುಂದುವರೆದಿದ್ದು, ಪ್ರಯಾಣಿಕರು ಪರದಾಟ ನಡೆಸಿದ್ದಾರೆ.