ಕಿರುತೆರೆಯ ಜನಪ್ರಿಯ ಸೀರಿಯಲ್ ‘ಗೀತಾ’ (Geetha) ಹೀರೋ ಧನುಷ್ ಗೌಡ್ (Dhanush Gowda) ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಸಂಜನಾ ಜೊತೆ ಅದ್ದೂರಿಯಾಗಿ ಧನುಷ್ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಈ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
‘ಗೀತಾ’ ಸೀರಿಯಲ್ ಮೂಲಕ ಮನೆಮಾತಾದ ವಿಜಯ್ ಅಲಿಯಾಸ್ ಧನುಷ್ ಗೌಡ ಅವರು ಗ್ರ್ಯಾಂಡ್ ಆಗಿ ಸಂಜನಾ (Sanjana Prabhu) ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಮೂಲಕ ಗಾಸಿಪ್ಗೆಲ್ಲಾ ಬ್ರೇಕ್ ಹಾಕಿದ್ದಾರೆ.
ಬೆಂಗಳೂರಿನ ಖಾಸಗಿ ರೆಸಾರ್ಟ್ವೊಂದರಲ್ಲಿ ಧನುಷ್-ಸಂಜನಾ ಎಂಗೇಜ್ಮೆಂಟ್ ಕಾರ್ಯಕ್ರಮ ನಡೆದಿದೆ. ‘ಗೀತಾ’ ಸಹನಟಿ ಭವ್ಯಾ ಗೌಡ ಮತ್ತು ಕುಟುಂಬಸ್ಥರು, ಆಪ್ತರು ಅಷ್ಟೇ ಈ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಸೋಷಿಯಲ್ ಮೀಡಿಯಾದಲ್ಲಿ ನಟಿ ಭವ್ಯಾ ಗೌಡ (Bhavya Gowda) ಅವರು ಧನುಷ್-ಸಂಜನಾ ಜೊತೆಗಿನ ಫೋಟೋ ಹಂಚಿಕೊಂಡು ಹೊಸ ಬಾಳಿಗೆ ಶುಭಕೋರಿದ್ದಾರೆ. ಧನುಷ್ ಎಂಗೇಜ್ಮೆಂಟ್ ಫೋಟೋ ವೈರಲ್ ಆಗ್ತಿದ್ದಂತೆ ಅಭಿಮಾನಿಗಳು ಶುಭ ಹಾರೈಸಿದ್ದಾರೆ. ಅಂದಹಾಗೆ ಧನುಷ್ ನಿಶ್ಚಿತಾರ್ಥದ ಸುಂದರ ಫೋಟೋಗಳು ಸುಜಯ್ ನಾಯ್ಡು ಅವರ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ.