ಬೆಂಗಳೂರು: ಬಳ್ಳಾರಿ ಆಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣದ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯೇ ನೀಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಈ ಬಗ್ಗೆ ಈಗಾಗಲೇ ಗಮನಹರಿಸಲಾಗಿದೆ. ಒಂದು ತಂಡ ರಚನೆ ಮಾಡಿ ಅವರು ವರದಿ ಕೊಟ್ಟಿದ್ದಾರೆ.
ಏನಾದ್ರೂ ಲೋಪದೋಷ ಇದ್ರೆ ಪರಿಶೀಲಿಸಿ ಕ್ರಮ ಕೈಗೊಳ್ತೇವೆ ಎಂದರು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅವ್ಯವಸ್ಥೆ ಉಂಟಾಗಿರುವ ವಿಚಾರದ ಬಗ್ಗೆ ಮಾತನಾಡಿ, ಸದ್ಯ ಸರ್ಕಾರಿ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ಕೊಡಲಾಗ್ತಿದೆ. ವಿಕ್ಟೋರಿಯಾದಲ್ಲೂ ಸೂಕ್ತ ಚಿಕಿತ್ಸೆ ಸಿಗ್ತಿದೆ. ಒಂದು ವೇಳೆ ಸಮಸ್ಯೆ ಇದ್ರೆ ಪರಿಶೀಲಿಸ್ತೀವೆ ಎಂದರು.
ಗಮನಿಸಿ.. ಗುರುವಾರದ ದಿನ ಅಪ್ಪಿ ತಪ್ಪಿಯೂ ಈ ಕೆಲಸಗಳನ್ನು ಮಾಡಲೇಬಾರದು..!?
ಇನ್ನು, ಸಂಪುಟ ಪುನರ್ ರಚನೆ ಚರ್ಚೆ, ಅಧ್ಯಕ್ಷರ ಬದಲಾವಣೆ ವಿಚಾರದ ಬಗ್ಗೆ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ಸಾಕಷ್ಟು ವಿಷಯ ಇರುತ್ತೆ, ಅದಕ್ಕೆ ದೆಹಲಿಗೆ ಹೋಗ್ತಿರ್ತಾರೆ. ಆದ್ರೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಚರ್ಚೆ ಇದೆ.
ಈಗಾಗಲೇ ಡಿಸಿಎಂ ಅವರು ಬಂದು 5 ವರ್ಷ ಮುಗೀತಿದೆ. ಹೈಕಮಾಂಡ್ ಏನು ನಿರ್ಧಾರ ಮಾಡುತ್ತೆ ನೋಡೋಣ. ಸದ್ಯ ಅವರೇ ಮುಂದುವರಿದ್ರೂ ಸಂತೋಷ. ಆದ್ರೆ ಅವರಿಗೆ ಬೇರೆ ಬೇರೆ ಕೆಲಸದ ಹೊರೆ ಇರೋದರಿಂದ ಫುಲ್ ಟೈಮ್ ಯಾರಾದರೂ ಆದ್ರೆ ಒಳ್ಳೇದು ಎಂದು ಹೇಳಿದರು.