ರಾಯಚೂರು:- ಕರ್ನಾಟಕದಲ್ಲಿ ಕಳೆದ ಇತ್ತೀಚಿನ ದಿನಗಳಲ್ಲಿ ಬಾಣಂತಿಯರ ಸರಣಿ ಸಾವು ಕೇಸ್ ಮುಂದುವರಿದಿದ್ದು, ವೈದ್ಯರ ನಿರ್ಲಕ್ಷ್ಯ ಆರೋಪ ಕೇಳಿ ಬಂದಿದೆ.
ಕುಡಿದ ಮತ್ತಲ್ಲಿ ಆಟೋ ಚಾಲನೆ: ಚಾಲಕನ ದರ್ಪಕ್ಕೆ ಬೇಸತ್ತ ಮಹಿಳೆ ಹೈರಾಣು!
ಗಡಿ ಜಿಲ್ಲೆ ರಾಯಚೂರಿನಲ್ಲಿ ಬಾಣಂತಿಯರ ಸರಣಿ ಸಾವಿಗೆ ಕೊನೆಯೇ ಇಲ್ಲದಂತಾಗಿದೆ. ಅಕ್ಟೋಬರ್ ನಿಂದ ಈ ವರೆಗೆ ಜಿಲ್ಲೆಯಲ್ಲಿ ಒಟ್ಟು 11 ಬಾಣಂತಿಯರು ಉಸಿರು ಚೆಲ್ಲಿದ್ದು, ಮೂರು ಹಸುಗೂಸುಗಳು ಕೂಡ ಸಾವನ್ನಪ್ಪಿವೆ
ಬಳ್ಳಾರಿ ಕೇಸ್ಗಳಂತೆ ಇಲ್ಲಿಯೂ ಪಶ್ಚಿಮ ಬಂಗಾಳ ಕಂಪೆನಿಯ ಆರ್ಎಲ್ ಫ್ಲುಯಿಡ್ ಅನ್ನು ಬಾಣಂತಿಯರಿಗೆ ನೀಡಲಾಗಿತ್ತು. ಈ ಬಗ್ಗೆ ಜಿಲ್ಲಾಡಳಿತ ಆರ್ಎಲ್ ಫ್ಲುಯಿಡ್ನ ಸ್ಯಾಂಪಲ್ಗಳನ್ನು ಪರೀಕ್ಷೆಗೆ ಒಳಪಡಿಸಿದ್ದು, ಬೆಂಗಳೂರು ಹಾಗೂ ಹೈದರಾಬಾದ್ ಲ್ಯಾಬ್ಗಳಿಂದ ವರದಿ ಬಂದಿದೆ. ಅದು ಸರ್ಕಾರಕ್ಕೂ ತಲುಪಿದೆ.
ಜಿಲ್ಲೆಯಲ್ಲಿ ನಡೆದ ಉಳಿದ ಕೇಸ್ಗಳ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ, ತಪ್ಪಿತಸ್ಥ ವೈದ್ಯರ ವಿರುದ್ದ ಕ್ರಮಕೈಗೊಳ್ಳುವಂತೆ ಮೃತ ಬಾಣಂತಿಯರ ಕುಟುಂಬಸ್ಥರು ಹಾಗೂ ಹೋರಾಟಗಾರರು ಆಗ್ರಹಿಸಿದ್ದರು. ಆದರೆ, ಆರೋಗ್ಯ ಇಲಾಖೆ ಯಾವುದೇ ಕ್ರಮಕೈಗೊಂಡಿರಲಿಲ್ಲ.
ಈ ಮಧ್ಯೆ ಸಿಂಧನೂರು ತಾಲ್ಲೂಕು ಆಸ್ಪತ್ರೆಯಂತೆ ರಿಮ್ಸ್ ಆಸ್ಪತ್ರೆಯಲ್ಲೂ ನಾಲ್ಕು ಜನ ಬಾಣಂತಿಯರು ಉಸಿರು ಚೆಲ್ಲಿದ್ದು, ರಿಮ್ಸ್ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ವಿರುದ್ಧ ಮೃತರ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.
ಜಿಲ್ಲೆಯ ಸಿರವಾರ ತಾಲ್ಲೂಕಿನ ಕಲ್ಲೂರು ಮೂಲದ ಉಮಾ ತನ್ನ ಹಸುಗೂಸು ಸಮೇತ ರಿಮ್ಸ್ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾರೆ. ಬಳಿಕ ಜಾಗಿರ ವೆಂಕಟಾಪುರ ಗ್ರಾಮದ ರೆಹಮತ್ ಬೀ ಮಗುವಿಗೆ ಜನ್ಮ ನೀಡಿದ ಬಳಿಕ ಚಿಕಿತ್ಸೆ ಫಲಕಾರಿಯಾಗದೇ ರಿಮ್ಸ್ ನಲ್ಲಿ ಅಸುನೀಗಿದ್ದಾರೆ. ನಂತರ ರಾಯಚೂರು ತಾಲ್ಲೂಕಿನ ರಂಗಾಪುರ ಗ್ರಾಮದ ನಿಂಗಮ್ಮ ಎಂಬ ಮಹಿಳೆ ಸಾಮಾನ್ಯ ಹೆರಿಗೆಯಾಗಿ ಮನೆ ಸೇರಿದ ಬಳಿಕ ಆರೋಗ್ಯದಲ್ಲಿ ಏರುಪೇರಾಗಿ ಮತ್ತೆ ರಿಮ್ಸ್ ಆಸ್ಪತ್ರೆ ಸೇರಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ರಿಮ್ಸ್ನಲ್ಲೇ ಕೊನೆಯುಸಿರೆಳೆದಿದ್ದಾರೆ.