ಕಲಬುರ್ಗಿ:- ಜಿಲ್ಲೆಯ ಗೊಬ್ಬೂರ್ ಬಿ ಗ್ರಾಮದ ಹೊರವಲಯದಲ್ಲಿ ಟೆಂಪೋ ಟ್ರಾವೆಲರ್ ಟೈಯರ್ ಬ್ಲಾಸ್ಟ್ ಆದ ಪರಿಣಾಮ ಟಿಟಿ, ಕಬ್ಬಿನ ಲಾರಿ ಮತ್ತು ಬೈಕ್ ನಡುವೆ ಸರಣಿ ಅಪಘಾತ ಸಂಭವಿಸಿದ ಘಟನೆ ಜರುಗಿದೆ.
ಡಿಕೆ ಬ್ರದರ್ಸ್ ವಿರುದ್ಧ ಮುನಿರತ್ನ ನೇರಾನೇರ ಆರೋಪ: ಶಾಸಕ ಹೇಳಿದ್ದೇನು?
ಘಟನೆಯಿಂದ ವಿನೂತಾ ಕಲಬುರಗಿ, ಅನೂಪ್ ಮಾಧವ್, ಬಸವರಾಜ್ ಸಾವನ್ನಪ್ಪಿದ ದುರ್ದೈವಿಗಳು. ಮೃತ ವಿನೂತಾ ಹಾಗೂ ಅನೂಪ್ ಮಾಧವ್ ಕಲಬುರಗಿಯ ಸ್ಟೇಷನ್ ಬಜಾರ್ ಏರಿಯಾದ ನಿವಾಸಿ ಎನ್ನಲಾಗಿದೆ.
ಮೃತ ಬೈಕ್ ಸವಾರ ಬಸವರಾಜ್ ಗೊಬ್ಬೂರ್ ಬಿ ಗ್ರಾಮದ ನಿವಾಸಿ ಆಗಿದ್ದಾರೆ. ಇನ್ನೂ ಟಿಟಿಯಲ್ಲಿದ್ದ ಉಳಿದ ಏಳು ಜನ ಗಾಯಾಳುಗಳನ್ನ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಗಾಣಗಾಪುರದ ದತ್ತನ ದರ್ಶನ ಮುಗಿಸಿಕೊಂಡು ಕಲಬುರಗಿಗೆ ಟಿಟಿ ವಾಹನ ಬರುತ್ತಿತ್ತು. ಇನ್ನೂ ಕಲಬುರಗಿಯಿಂದ ಚವಡಾಪುರದ ಕಡೆಗೆ ಕಬ್ಬು ತುಂಬಿಕೊಂಡು ಲಾರಿ ಹೊರಟಿತ್ತು. ಈ ವೇಳೆ ಅವಘಡ ಸಂಭವಿಸಿದೆ.
ಸ್ಥಳಕ್ಕೆ ಕಲಬುರಗಿ ಎಸ್ ಪಿ ಅಡ್ಡೂರು ಶ್ರೀನಿವಾಸಲು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.