ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲೂಕಿನ ಗೌರಿಕಟ್ಟೆಯಲ್ಲಿ ಹೊರನಾಡು, ಶೃಂಗೇರಿ ಪ್ರವಾಸಕ್ಕೆ ಬಂದಿದ್ದವರ ಕಾರುಗಳ ನಡುವೆ ಡಿಕ್ಕಿಯಾಗಿದ್ದು, ಗಾಯಾಳುಗಳಿಗೆ ಕೊಪ್ಪ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಕಿರಿದಾದ ಹಾಗೂ ತಿರುವುಗಳಿರುವ ಶೃಂಗೇರಿ-ಹೊರನಾಡು ಪರ್ಯಾಯ ರಸ್ತೆ ಇದಾಗಿದ್ದು, ಸರಣಿ ಅಪಘಾತದಿಂದ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಟ ನಡೆಸುವ ಸ್ಥಿತಿ ಇದಾಗಿದೆ.