ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಸ್ಯಾಂಡಲ್ವುಡ್ನ ಹಿರಿಯ ನಿರ್ದೇಶಕಎಸ್. ಉಮೇಶ್ ಅವರು ನಿಧನ ಹೊಂದಿದ್ದಾರೆ. ಬನಶಂಕರಿಯ ಚಿತಾಗಾರದಲ್ಲಿ ಇಂದು ಅಂತ್ಯಕ್ರಿಯೆ ನಡೆಯಲಿದೆ. ದಿವಂಗತ ನಟ ಕಾಶಿನಾಥ್ ಹಾಗೂ ಭವ್ಯ ಅವರು ಅಭಿನಯ ಮಾಡಿದ್ದ ಅವಳೇ ನನ್ನ ಹೆಂಡತಿ ಸಿನಿಮಾವನ್ನು ನಿರ್ಮಾಪಕ ಕೆ.ಪ್ರಭಾಕರ್ ಜೊತೆ ಸೇರಿ ಎಸ್.ಉಮೇಶ್ ಅವರು ನಿರ್ದೇಶನ ಮಾಡಿದ್ದರು.
ಈ ಸಿನಿಮಾದ ಮೂಲಕವೇ ಇವರು ಹೆಚ್ಚು ಪ್ರಖ್ಯಾತಿ ಗಳಿಸಿದರು. ಈ ಸಿನಿಮಾ ದೊಡ್ಡ ಹಿಟ್ ಆಗಿದ್ದಲ್ಲದೆ, ತಮಿಳು, ತೆಲುಗು, ಹಿಂದಿಗೂ ರಿಮೇಕ್ ಆಗಿತ್ತು. ಇದಾದ ಮೇಲೆ ಪ್ರೇಮ ಪರೀಕ್ಷೆ, ಬನ್ನಿ ಒಂದ್ಸಲ ನೋಡಿ, ಸಿಡಿದೆದ್ದ ಗಂಡು, ದಾಯಾದಿ, ತುಂಬಿದ ಮನೆ ಹೀಗೆ ಕನ್ನಡ ಸಿನಿಮಾ ಇಂಡಸ್ಟ್ರಿಗೆ 24 ಚಿತ್ರಗಳನ್ನು ನೀಡಿದ್ದಾರೆ.
Papaya Benefits: ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿ ತಿನ್ನಿ ಸಾಕು.. ಶುಗರ್, ಅಜೀರ್ಣ, ಅಸಿಡಿಟಿ ಸಮಸ್ಯೆಗಳು ಮಾಯ..!
ಕನ್ನಡ ಮಾತ್ರವಲ್ಲದೆ, ತಮಿಳಲ್ಲೂ ಫೇಮಸ್ ಆಗಿದ್ದ ಉಮೇಶ್ ಅವರು, ವೃತ್ತಿ ಜೀವನದಲ್ಲಿ ಅನೇಕ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಆದರೆ, ಈಚೆಗೆ ಅವರಿಗೆ ಆರೋಗ್ಯ ಕೈ ಕೊಟ್ಟಿತ್ತು. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಇದೀಗ ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ.