ವ್ಯಾಲೆಂಟೀನ್ ವಾರದ ಎರಡು ದಿನಗಳು ಕಳೆದಿವೆ. ಇವತ್ತು ಈ ವಾರದ ಮೂರನೇ ದಿನ. ವ್ಯಾಲೆಂಟೀನ್ ವಾರದ ಪ್ರಕಾರ ಇವತ್ತು ಚಾಕೊಲೇಟ್ ಡೇ. ಫೆಬ್ರವರಿ 9 ನೇ ತಾರೀಕನ್ನು ಪ್ರತಿವರ್ಷ ವ್ಯಾಲೆಂಟೀನ್ ವಾರದ ಚಾಕೊಲೇಟ್ ಡೇ ಎಂದು ಆಚರಿಸಲಾಗುತ್ತದೆ. ಮೊದಲ ದಿನ ರೋಸ್ ಡೇ. ಅಂದರೆ, ಗುಲಾಬಿ ಹೂವಿನೊಂದಿಗೆ ತಮ್ಮ ಪ್ರೀತಿಯನ್ನು ಹಂಚಿಕೊಳ್ಳುವ ದಿನ. ಎರಡನೇ ದಿನ ಪ್ರಪೋಸ್ ಡೇ. ಇದು ಅಧಿಕೃತವಾಗಿ ಪ್ರೀತಿಯ ತಿಳಿಸುವ ದಿನ.
ಅಂದರೆ, ಇಲ್ಲಿಂದ ಈ ಇಬ್ಬರ ಹೊಸ ಜೀವನ ಶುರುವಾಗುತ್ತದೆ. ಹೇಗೂ ಪ್ರಪೋಸ್ ಮಾಡಿ ಆಗಿದೆ. ಇನ್ನು ಬಾಯಿ ಸಿಹಿ ಮಾಡದಿದ್ದರೆ ಹೇಗೆ…? ಅದಕ್ಕೆಂದೇ ಮೀಸಲಾಗಿರುವುದು ಮೂರನೇ ದಿನ. ಚಾಕೊಲೇಟ್ ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ…? ಎಲ್ಲರೂ ಚಾಕೊಲೇಟ್ ಇಷ್ಟಪಡುತ್ತಾರೆ. ಇದೇ ಕಾರಣಕ್ಕೆ ಫೆಬ್ರವರಿ 9ರಂದು ಚಾಕೊಲೇಟ್ ಗಿಫ್ಟ್ ಆಗಿ ನೀಡಲಾಗುತ್ತದೆ. ಈ ಮೂಲಕ ಪ್ರೀತಿಯ ದಿನವನ್ನು ಇನ್ನಷ್ಟು ಆಪ್ತವನ್ನಾಗಿಸಲಾಗುತ್ತದೆ.
ಚಾಕೊಲೇಟ್ ದಿನಕ್ಕಾಗಿ ಕೆಲವು ಸಾಲುಗಳು :
ಜೀವನ ಬಹಳ ಸುಂದರ – ಸಿಹಿ
ಆದರೆ ನಿನ್ನೊಂದಿಗೆ ಕಳೆಯುವ ಹೊತ್ತು ಇನ್ನೂ ಸಿಹಿ
ಹ್ಯಾಪಿ ಚಾಕಲೇಟ್ ಡೇ ಮೈ ಲವ್
ಪ್ರೀತಿಯಾದರೆ ಡೈರಿ ಮಿಲ್ಕ್
ಸ್ನೇಹವಾದರೆ ಮಂಚ್
ಬೆಸ್ಟ್ ಫ್ರೆಂಡ್ ಆದರೆ ಕಿಟ್ ಕ್ಯಾಟ್
ದ್ವೇಷಿಸುತ್ತಿದ್ದರೆ ಪೋಲೊ
ಕೂಲ್ ಪರ್ಸನ್ ಅನ್ನಿಸಿದರೆ ಮಿಂಟ್
ಇವುಗಳಲ್ಲಿ ನನಗೆ ಯಾವ ಚಾಕಲೇಟ್ ನೀಡುವೆ
ಹ್ಯಾಪಿ ಚಾಕಲೇಟ್ ಡೇ
ಸಂಬಂಧದಲ್ಲಿ ನಂಬಿಕೆ ಇರಲಿ
ನಾಲಿಗೆಯಲ್ಲಿ ಸದಾ ಮಾಧುರ್ಯವಿರಲಿ,
ನಿನ್ನ ಜೀವನದಲ್ಲಿ ಸಿಹಿ ತುಂಬಿರಲಿ ,
ಚಾಕೊಲೇಟ್ ದಿನದ ಶುಭಾಶಯಗಳು!
ಚಾಕಲೇಟಿಗಾಗಿ ಬಹಳ ಅಲೆದಾಡಿದೆ
ಆದರೆ ನಿನ್ನ ತುಟಿಗೆ ಸರಿ ಹೊಂದುವ ಚಾಕಲೇಟ್ ಸಿಗಲೇ ಇಲ್ಲ
ಹ್ಯಾಪಿ ಚಾಕಲೇಟ್ ಡೇ ಮೈ ಚಾಕಲೇಟ್
ಈ ಚಾಕಲೇಟ್ ನೀನು ತಿಂದರೆ ಚಾಕಲೇಟ್ ಜೊತೆ ನಾನೂ ನಿನ್ನವನಾಗುತ್ತೇನೆ
ಚಾಕೊಲೇಟ್ ದಿನದ ಶುಭಾಶಯಗಳು!
ನೀನು ಸ್ವೀಟ್ ಚಾಕಲೇಟ್, ನಾನು ಹಾಟ್ ಚಾಕಲೇಟ್
ನಾವಿಬ್ಬರು ಜೊತೆಯಾದರೆ ಡಬಲ್ ಚಾಕಲೇಟ್
ಹ್ಯಾಪಿ ಚಾಕಲೇಟ್ ಡೇ
ನಿಜವಾದ ಪ್ರೀತಿ ಚಾಕಲೇಟ್ ರೀತಿ
100 ಪರ್ಸೆಂಟ್ ಸಿಹಿ
ಹ್ಯಾಪಿ ಚಾಕಲೇಟ್ ಡೇ