ಬೆಂಗಳೂರು: ರಾಜ್ಯಾದ್ಯಂತ ಅಭಿಮಾನಿಗಳು ನಟ ಪುನೀತ್ ರಾಜ್ಕುಮಾರ್ ಜನ್ಮದಿನವನ್ನು ಆಚರಿಸುತ್ತಿದ್ದಾರೆ. 50ನೇ ವರ್ಷದ ಬರ್ತ್ಡೇ ಆದ್ದರಿಂದ ಈ ಬಾರಿ ಸ್ಪೆಷಲ್ ಆಗಿದೆ. ಸಮಾಧಿ ಸ್ಥಳಕ್ಕೆ ಅಭಿಮಾನಿಗಳು, ಕುಟುಂಬದವರು ಹಾಗೂ ಸೆಲೆಬ್ರಿಟಿಗಳು ಭೇಟಿ ನೀಡುತ್ತಿದ್ದಾರೆ. ಇನ್ನೂ ಚಿಕ್ಕಪ್ಪನ ಸ್ಮಾರಕಕ್ಕೆ ಯುವ ರಾಜ್ ಕುಮಾರ್ ಪೂಜೆ ಸಲ್ಲಿಸಿದ್ದಾರೆ.
ಹೈಡ್ರೋಪೋನಿಕ್ ತೋಟಗಾರಿಕೆ ಎಂದರೇನು? ಮಣ್ಣು ಇಲ್ಲದೆ ಸಸ್ಯಗಳನ್ನು ಹೇಗೆ ಬೆಳೆಸಬಹುದು? ಇಲ್ಲಿದೆ ಮಾಹಿತಿ
ನಂತರ ಮಾತನಾಡಿದ ಅವರು, ಮೊದಲಿಗೆ ನಮ್ಮ ಚಿಕ್ಕಪ್ಪನಿಗೆ 50ನೇ ವರ್ಷದ ಹುಟ್ಟುಹಬ್ಬದ ಶುಭಾಶಯಗಳು. ಬೆಳಗ್ಗೆ 6 ಗಂಟೆಯಿಂದಕ್ಕೆ ಸ್ಮಾರಕದ ಬಳಿ ಜನ ಬಂದಿದ್ದಾರೆ. ವರ್ಷದಿಂದ ವರ್ಷಕ್ಕೆ ಅಭಿಮಾನಿಗಳ ಸಂಖ್ಯೆ ಹೆಚ್ಚಾಗುತ್ತಿದೆ.
ಇದೆಲ್ಲ ನೋಡಿದ್ರೆ ಚಿಕ್ಕಪ್ಪ ಇಲ್ಲೇ ನಮ್ಮ ಜೊತೆನೇ ಇದ್ದಾರೆ ಅನಿಸುತ್ತದೆ. ‘ಅಪ್ಪು’ ಸಿನಿಮಾ ರೀ-ರಿಲೀಸ್ ಆದಾಗಲೂ ಅಭಿಮಾನಿಗಳು ಹೊಸ ಸಿನಿಮಾ ರಿಲೀಸ್ ಆದಂತೆ ಬಂದು ನೋಡಿದ್ರು. ಅಪ್ಪು ರೀ-ರಿಲೀಸ್ನಲ್ಲೂ ಅಷ್ಟೇ ಪವರ್, ಎನರ್ಜಿ, ಸೆಲೆಬ್ರೇಷನ್ ಇತ್ತು ಎಂದಿದ್ದಾರೆ.