ನೈಸರ್ಗಿಕ ಔಷಧದಲ್ಲಿ ಪ್ರಮುಖ ಪಾತ್ರ ವಹಿಸುವ ಅನೇಕ ಔಷಧೀಯ ಮರಗಳು ಮತ್ತು ಸಸ್ಯಗಳು ನಮ್ಮ ಸುತ್ತಲೂ ಕಂಡು ಬರುತ್ತವೆ. ಈ ಸಸ್ಯಗಳು ನಮ್ಮ ದೇಹದ ವಿವಿಧ ಸಮಸ್ಯೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಜೊತೆಗೆ ನಮ್ಮ ಆರೋಗ್ಯವನ್ನು ಸುಧಾರಿಸುತ್ತದೆ. ವೀಳ್ಯದೆಲೆ ಕೂಡ ಅಂತಹದರಲ್ಲಿ ಒಂದು.
ವೀಳ್ಯದೆಲೆಯನ್ನು ತಿನ್ನುವುದರಿಂದ ಅನೇಕ ದೀರ್ಘಕಾಲದ ಕಾಯಿಲೆಗಳಿಂದ ಮುಕ್ತಿ ಪಡೆಯಬಹುದು. ಅನೇಕ ಜನರು ಈಗ ಮನೆಯಲ್ಲಿಯೂ ವೀಳ್ಯದೆಲೆ ಬೆಳೆಸುತ್ತಿದ್ದಾರೆ. ಆದರೆ ವಾಸ್ತು ಪ್ರಕಾರ.. ಕೆಲವು ರೀತಿಯ ಗಿಡಗಳನ್ನು ಮನೆಯಲ್ಲಿ ಬೆಳೆಸಬಾರದು. ಹೀಗೆ ಬೆಳೆಸುವುದರಿಂದ ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.
ಸಿಎಂ ಬದಲಾವಣೆ ಪ್ರಶ್ನೆ ಬಂದ್ರೆ, ನಾನೇ ಸ್ಪರ್ಧೆ ಮಾಡ್ತೀನಿ: ಶಾಮನೂರು ಶಿವಶಂಕರಪ್ಪ!
ವಾಸ್ತು ಪ್ರಕಾರ ಕೆಲವು ಗಿಡಗಳನ್ನು ಬೆಳೆಸುವುದರಿಂದ ಆರ್ಥಿಕ ಲಾಭವೂ ಬರುತ್ತದೆ. ಮನೆಯಲ್ಲಿ ವೀಳ್ಯದೆಲೆ ಬಳ್ಳಿಯನ್ನು ಬೆಳೆಸುವುದರಿಂದ ಏನು ಪ್ರಯೋಜನ? ಇದನ್ನು ಮನೆಯಲ್ಲಿ ಬೆಳೆಸಬಹುದೇ? ಯಾವ ದಿಕ್ಕಿನಲ್ಲಿ ಇಟ್ಟರೆ ಪ್ರಯೋಜನ ಎಂದು ತಿಳಿಯೋಣ.
ವೀಳ್ಯದೆಲೆ ಹಿಂದೂ ಸಂಪ್ರದಾಯಗಳ ಪ್ರಕಾರ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ಆಯುರ್ವೇದದಲ್ಲಿಯೂ ಸಹ ಅನೇಕ ರೋಗಗಳನ್ನು ಕಡಿಮೆ ಮಾಡಲು ಔಷಧಿಯಾಗಿ ಬಳಸಲಾಗುತ್ತದೆ. ಆದರೆ ವೀಳ್ಯದೆಲೆ ಇರುವ ಮನೆಯಲ್ಲಿ ಶನಿ ಇರುವುದಿಲ್ಲ. ವೀಳ್ಯದೆಲೆಯ ಬಳ್ಳಿ ಮನೆಯಲ್ಲಿದ್ದರೆ ಆರ್ಥಿಕ ಸಮಸ್ಯೆಗಳು ಬರುವುದಿಲ್ಲ. ಮನೆಯಲ್ಲಿ ಹಣದ ಕೊರತೆ ಕಾಡುವುದಿಲ್ಲ ಎಂದು ಹೇಳಲಾಗುತ್ತದೆ.
ವೀಳ್ಯದೆಲೆಯ ಬಳ್ಳಿ ಮನೆಯಲ್ಲಿರುವುದು ಎಂದರೆ ಲಕ್ಷ್ಮೀದೇವಿ ಮತ್ತು ಆಂಜನೇಯ ಸ್ವಾಮಿಯ ಮನೆಯಲ್ಲಿರುವುದು ಎಂದರ್ಥ. ಈ ಗಿಡ ಸರಿಯಾಗಿ ಬೆಳೆದರೆ ಸಾಲದ ಬಾಧೆಯೂ ಬರುವುದಿಲ್ಲ ಎನ್ನುತ್ತಾರೆ. ವೀಳ್ಯದೆಲೆ ಚೆನ್ನಾಗಿ ಬೆಳೆಯಲು ಬಿಸಿಲಿನ ಸ್ಥಳದಲ್ಲಿ ಇಡಬೇಕು. ಇದನ್ನು ಪೂರ್ವ ದಿಕ್ಕಿಗೆ ಇಟ್ಟರೆ ತುಂಬಾ ಒಳ್ಳೆಯದು.