ಮಣಿಪುರ : ಮಣಿಪುರದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು, ಹಿಂಸಾಚಾರ ಪೀಡಿತ ಜಿರಿಬ್ರಾಮ್ ನಲ್ಲಿ ಭಧ್ರತಾ ಪಡೆಗಳು ಮತ್ತು ಪ್ರತಿಭಟನಾಕಾರರ ಮಧ್ಯೆ ಘರ್ಷಣೆ ನಡೆದಿದೆ. ಘರ್ಷಣೆಯಲ್ಲಿ ಓರ್ವ ಯುವಕ ಸಾವನ್ನಪ್ಪಿದ್ದಾನೆ. ಕಳೆದ ಭಾನುವಾರ ರಾತ್ರಿ ಗುಂಡಿನ ಚಕಮಕಿ ನಡೆದಿದ್ದು, ಓರ್ವ ಯುವಕ ಸಾವನ್ನಪ್ಪಿದ್ದಾನೆ. ಮಣಿಪುರದ ವಿಶೇಷ ಪೊಲೀಸ್ ಕಮಾಂಡೋಗಳು ಗುಂಪು ಚದುರಿಸಲು ಗುಂಡು ಹಾರಿಸಿದ್ದು, ಈ ವೇಳೆ ಅಥೌಬೌ ಎಂಬಾತ ಸಾವನ್ನಪಿದ್ದು, ಇಬ್ಬರಿಗೆ ಗಾಯವಾಗಿದೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.
ಇನ್ನೂ ಮಣಿಪುರದಲ್ಲಿ ಭದ್ರತಾ ಸಿಬ್ಬಂದಿಗಳನ್ನು ಹೆಚ್ಚಿಸಲಾಗಿದೆ. 5000 ಭದ್ರತಾ ಸಿಬ್ಬಂದಿಗಳನ್ನೊಳಗೊಂಡ ಹೆಚ್ಚುವರಿ 50 ಸಿಎಪಿಎಫ್ ತುಕಡಿಗಳನ್ನು ನಿಯೋಜಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಿದೆ. ಇನ್ನೂ ಮಣಿಪುರದಲ್ಲಿ ಪ್ರಾಣಹಾನಿ ಮತ್ತು ಶಾಂತಿ ಸುವ್ಯವಸ್ಥೆ ಹದಗೆಡಲು ಕಾರಣವಾದ ಮೂರು ಪ್ರಕರಣಗಳ ಬಗ್ಗೆ ಎನ್ ಐಎ ತನಿಖೆ ತೀವ್ರಗೊಳಿಸಿದೆ.