ಬಾಗಲಕೋಟೆ: ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನಲ್ಲಿ ರಾಂಪುರ ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಯ ಹಾಗೂ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಬಾಗಲಕೋಟೆ ಮಕ್ಕಳ ಸಾಹಿತ್ಯ ಪರಿಷತ್ತು ತಾಲೂಕ ಘಟಕ ರಬಕವಿ ಬನಹಟ್ಟಿ ಇವರ ಸಂಯುಕ್ತ ಆಶ್ರಯದಲ್ಲಿ ರಬಕವಿ ಬನಹಟ್ಟಿ ತಾಲೂಕ ದ್ವಿತೀಯ ಮಕ್ಕಳ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮ ಇದೇ ಶನಿವಾರ ದಿನಾಂಕ 23.11.2024 ರಂದು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆ ರಾಂಪುರ ಆವರಣದಲ್ಲಿ ನಡೆಯಲಿದೆ.
ಕನಕದಾಸರ ಆಚಾರ ವಿಚಾರಗಳನ್ನು ಮೈಗೂಡಿಸಿಕೊಂಡು ನಡೆಯಬೇಕು: ಬೈರತಿ ಬಸವರಾಜ್
ಬನಹಟ್ಟಿಯ ಬಸ್ ನಿಲ್ದಾಣದಿಂದ ರಾಮಪುರ ಶಾಲೆಯವರೆಗೂ ಭವ್ಯ ಮೆರವಣಿಗೆ ಕಾರ್ಯಕ್ರಮ ನಡೆಯಲಿದೆ.
ಸಾನಿಧ್ಯ ಪರಮಪೂಜ್ಯ ಶ್ರೀ ಗುರುಸಿದ್ದೇಶ್ವರ ಮಹಾಸ್ವಾಮಿಗಳು ಶ್ರೀ ಗುರುದೇವ ಬ್ರಹ್ಮಾನಂದ ಆಶ್ರಮ ರಬಕವಿ.
ಅಧ್ಯಕ್ಷತೆ: ಶ್ರೀ ಜಯವಂತ ಕಾಡದೇವರ ಹಿರಿಯ ಮಕ್ಕಳ ಸಾಹಿತಿಗಳು.
ಸರ್ವಾಧ್ಯಕ್ಷತೆ: ಕುಮಾರಿ ಸುಹಾನಿ ಗಿರೀಶ್ ಮುತ್ತೂರು ಡಿ ಕೆ ಕೊಟ್ರಶೆಟ್ಟಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ರಬಕವಿ.
ಉದ್ಘಾಟಕರು ಸಿದ್ದು ಸವದಿ ಶಾಸಕರು ತೇರದಾಳ.
ಚಿತ್ರಕಲಾ ಪ್ರದರ್ಶನ ಉದ್ಘಾಟನೆ ಶ್ರೀಮತಿ ಉಮಾಶ್ರೀ ವಿಧಾನ ಪರಿಷತ್ ಸದಸ್ಯರು ಬೆಂಗಳೂರು.
ಮಹದೇವ ಕವಿಶೆಟ್ಟಿ ಖ್ಯಾತ ಚಿತ್ರ ಕಲಾವಿದರು.
ಕರಕುಶಲ ವಸ್ತು ಪ್ರದರ್ಶನ ಉದ್ಘಾಟನೆ. ಸಿದ್ದು ಕೊಣ್ಣೂರ ಕಾಂಗ್ರೆಸ್ ಪಕ್ಷದ ಮುಖಂಡರು.
ಎ ಕೆ ಬಸಣ್ಣವರ ಶಿಕ್ಷಣಧಿಕಾರಿ ಜಮಖಂಡಿ.
ಆಶಯ ನುಡಿ. ಸಿ ಎನ ಅಶೋಕ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು.
ಇನ್ನು ಹಲವಾರು ಗಣ್ಯಾತಿ ಗಣ್ಯರು ಪಾಲ್ಗೊಳ್ಳಲಿದ್ದಾರೆ ಮತ್ತು ವಿವಿಧ ಸಾಧನೆ ಮಾಡಿದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಈ ಕಾರ್ಯಕ್ರಮದಲ್ಲಿ ಸೇರುವವರಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮವನ್ನು ವೀಕ್ಷಿಸಿ ಆಶೀರ್ವದಿಸಬೇಕೆಂದು ಶ್ರೀಮತಿ ಶೈಲಾ ಶ್ರೀಶೈಲ ಬುರ್ಲಿ ಅಧ್ಯಕ್ಷರು ಮ. ಸಾ. ಪ. ತಾಲೂಕ ಘಟಕ ರಬಕವಿ ಬನಹಟ್ಟಿ ಹೇಳಿದರು.
ಇದೇ ಸಂದರ್ಭದಲ್ಲಿ ಜಯವಂತ ಕಾಡದೇವರ ಹಿರಿಯ ಮಕ್ಕಳ ಸಾಹಿತಿಗಳು. ಸಿದ್ದಪ್ಪ ಮೇಣಿ ಪೂರ್ಣ ಪ್ರಜ್ಞ ಶಿಕ್ಷಣ ಸಂಸ್ಥೆಯ ಚೇರ್ಮನ್ನರು. ರಾಮದಾಸ ಸಿಂಘನ ವಾಯ್ಸ್ ಚೇರ್ಮನ್ನರು. ಶ್ರೀಶೈಲ್ ಬುರ್ಲಿ ಗೌರವ ಕಾರ್ಯದರ್ಶಿಗಳು ಕೈ.ಸಾ.ಪ. ರಬಕವಿ ಬನಹಟ್ಟಿ. ಶ್ರೀಮತಿ ಸಾವಿತ್ರಿ ಚಾಂಬರ. ಉಪಾಧ್ಯಕ್ಷರು ಶ್ರೀಮತಿ ಆರ್ ವಿ ಬಾಣಕಾರ ಸದಸ್ಯರು. ಕಿರಣ ಆಳಗಿ ಮಾಧ್ಯಮ ಸದಸ್ಯರು. ಕರಡಿ ಸೇರಿದಂತೆ ಮುಂತಾದವು ಪಾಲ್ಗೊಂಡಿದ್ದರು.
ಪ್ರಕಾಶ ಕುಂಬಾರ
ಬಾಗಲಕೋಟೆ