ಬೆಂಗಳೂರು: ಮಲ್ಲೇಶ್ವರಂ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಪ್ರತಿಷ್ಠಿತ ಕಾಲೇಜ್ ಗಳಲ್ಲಿ ಇಂಜಿನಿಯರಿಂಗ್ ಸೀಟ್ ಬ್ಲಾಕ್ ದಂಧೆ ಪ್ರಕರಣದ ಆರೋಪಗಳನ್ನು ಬಂಧಿಸಿದ್ದಾರೆ. ಕಿಂಗ್ ಪಿನ್ ಹರ್ಷ ಸೇರಿದಂತೆ 10ಮಂದಿ ಆರೋಪಗಳನ್ನು ಬಂಧಿಸಲಾಗಿದೆ. ಪ್ರಕಾಶ್, ರವಿಶಂಕರ್ , ಪುನೀತ್ , ಶಶಿಕುಮಾರ್, ಪುರುಷೋತ್ತಮ್ , ಅವಿನಾಶ್ ಬಂಧಿತರು. ಕೆಇಎ ನಲ್ಲಿ ಕೌನ್ಸೆಲಿಂಗ್ ಅಟೆಂಡ್ ಆಗಿ ಕಾಲೇಜ್ ಸೆಲೆಕ್ಟ್ ಮಾಡಿ ಹೋಗದವರನ್ನ ಟಾರ್ಗೆಟ್ ಮಾಡುತ್ತಿದ್ದರು.
ಮುಡಾ ಹಗರಣ: ಇಡಿ ವಿಚಾರಣೆಗೆ ಹಾರಜಾದ ನಗಾರಭಿವೃದ್ಧಿ ಕಾರ್ಯದರ್ಶಿ ದೀಪಾ ಚೋಳನ್
ಇದೇ ರೀತಿಯಾಗಿ ಸುಮಾರು 2625 ವಿದ್ಯಾರ್ಥಿಗಳು ನಾನಾ ಕಾರಣಗಳಿಂದ ಸೀಟ್ ರಿಜೆಕ್ಟ್ ಮಾಡಿರ್ತಾರೆ . ಗೌರ್ನಮೆಂಟ್ ಸೀಟ್ ಪಡೆದು ಹೋಗದ ವಿದ್ಯಾರ್ಥಿಗಳ ಸೀಟ್ ನ ಬ್ಲಾಕ್ ಮಾಡುತ್ತಿದ್ದ ಈ ಗ್ಯಾಂಗ್ , ಆ ಮೂಲಕ ಲಕ್ಷಾಂತರ ರೂಗೆ ಮ್ಯಾನೇಜ್ ಮೆಂಟ್ ಕೋಟಾದಡಿ ಬೇರೆಯವರಿಗೆ ಡೀಲ್ ಮಾಡುತಿತ್ತು. ಪ್ರತಿಷ್ಠಿತ ಕಾಲೇಜಿನ ಮ್ಯಾನೇಜ್ಮೆಂಟ್ ಹಾಗೂ ಮಧ್ಯವರ್ತಿಗಳ ಸಹಾಯದಿಂದ ಡೀಲ್ ಮಾಡ್ತಿದ್ದರು. ಈ ಬಗ್ಗೆಕಂಪ್ಲೆಂಟ್ ದಾಖಲಾಗಿದೆ ಅಂತಾ ಗೊತ್ತಾದ ಕೂಡಲೇ ಆರೋಪಿ ಪ್ರಕಾಶ್ ತನ್ನ ಜಮೀನಿನಲ್ಲಿ ಲ್ಯಾಪ್ ಟಾಪ್ ಗಳನ್ನು ಸುಟ್ಟುಹಾಕಿ ಎವಿಡೆನ್ಸ್ ಡೆಸ್ಟ್ರಾಯ್ ಮಾಡಿದ್ದನು.
ಕೆಇಎ ನ ನೌಕರ ಅವಿನಾಶ್ ನ ಸಹಾಯದಿಂದ ಪಾಸ್ ವರ್ಡ್ ಪಡೆದು ಸೀಟ್ ಬ್ಲಾಕಿಂಗ್ ಮಾಡ್ತಿದ್ದರು ಎಂಬುದು ತನಿಖೆಯಲ್ಲಿ ಗೊತ್ತಾಗಿದೆ. ಸೀಟ್ ಬ್ಲಾಕಿಂಗ್ ದಂಧೆ ಸಂಬಂಧ ಕೆಇಎ ಆಡಳಿತಾಧಿಕಾರಿ ಇಸಾಲುದ್ದೀನ್ ಜೆ.ಗಾಡಿಯಲ್ ನೀಡಿದ್ದರು. ನವೆಂಬರ್ 13 ರಂದ ದಾಖಲಾಗಿದ್ದ ಪ್ರಕರಣ ದಾಖಲಾಗಿತ್ತು. ಈ ಪ್ರಕಣರದಲ್ಲಿ 10 ಮಂದಿ ಆರೋಪಿ ಗಳನ್ನು ಬಂಧಿಸಿರುವ ಮಲ್ಲೇಶ್ವರಂ ಪೊಲೀಸರಿಂದ ತನಿಖೆ ಮುಂದುವರೆಸಿದ್ದಾರೆ.