ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ job ಸರ್ಚ್ ಮಾಡ್ತಿದ್ದೀರಾ ಹಾಗಿದ್ರೆ ಈ ಸುದ್ದಿ ಪೂರ್ತಿ ಓದಿ..
ಬೆಂಗಳೂರಿನಲ್ಲಿ ವೃತ್ತಿ ಮಾಡ ಬಯಸುವವರು ಎಂಜಿನಿಯರಿಂಗ್ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಹಾಕಬಹುದು. ಮೇ 20, 2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಹಾಕಬೇಕು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.
ಭಾರತೀಯ ವಿಜ್ಞಾನ ಸಂಸ್ಥೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 5 ಸಿಸ್ಟಂ ಎಂಜಿನಿಯರ್ ಹುದ್ದೆಗಳು ಖಾಲಿ ಇದೆ.
ಹುದ್ದೆಯ ಮಾಹಿತಿ:
ಸಿಸ್ಟಂ ಎಂಜಿನಿಯರ್-I- 2
ಸಿಸ್ಟಂ ಎಂಜಿನಿಯರ್-II- 2
ಸೀನಿಯರ್ ಸಿಸ್ಟಂ ಎಂಜಿನಿಯರ್-II-1
ವಿದ್ಯಾರ್ಹತೆ:
ಸಿಸ್ಟಂ ಎಂಜಿನಿಯರ್-I- ಬಿಇ/ಬಿ.ಟೆಕ್, ಎಂಸಿಎ, ಎಂ.ಎಸ್ಸಿ
ಸಿಸ್ಟಂ ಎಂಜಿನಿಯರ್-II- ಬಿಇ/ಬಿ.ಟೆಕ್, ಎಂಸಿಎ, ಎಂ.ಎಸ್ಸಿ
ಸೀನಿಯರ್ ಸಿಸ್ಟಂ ಎಂಜಿನಿಯರ್-II-ಬಿಇ/ಬಿ.ಟೆಕ್
ವಯೋಮಿತಿ:
ಸಿಸ್ಟಂ ಎಂಜಿನಿಯರ್-I- 30 ವರ್ಷ
ಸಿಸ್ಟಂ ಎಂಜಿನಿಯರ್-II- 35 ವರ್ಷ
ಸೀನಿಯರ್ ಸಿಸ್ಟಂ ಎಂಜಿನಿಯರ್-II- 40 ವರ್ಷ
ವೇತನ:
ಸಿಸ್ಟಂ ಎಂಜಿನಿಯರ್-I- ಮಾಸಿಕ ₹ 25,000
ಸಿಸ್ಟಂ ಎಂಜಿನಿಯರ್-II- ಮಾಸಿಕ ₹ 28,000
ಸೀನಿಯರ್ ಸಿಸ್ಟಂ ಎಂಜಿನಿಯರ್-II- ಮಾಸಿಕ ₹ 49,000
ಉದ್ಯೋಗದ ಸ್ಥಳ:
ಬೆಂಗಳೂರು