ಕೆಲಸ ಹುಡುಕಿ, ಹುಡುಕಿ ಸಾಕಾಗಿದ್ಯಾ!? ಹಾಗಿದ್ರೆ ಚಿಂತೆ ಬಿಡಿ. ಕೈ ತುಂಬಾ ಸಂಬಳ, ದುಡಿಯಲು ಕೆಲಸ ಇರುವ ಒಂದೊಳ್ಳೆ job ಬಗ್ಗೆ ಹೇಳ್ತಿದ್ದೀವಿ ಕೇಳಿ.
ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್ಗೆ ಐಟಿ ವಿಚಾರಣೆ ಬಿಸಿ – ಜೈಲಿನಲ್ಲೇ 7 ಗಂಟೆ ಡ್ರಿಲ್!
ಎಸ್, ಬಳ್ಳಾರಿಯಲ್ಲಿ ಖಾಲಿ ಇರುವ ಸ್ಟಾಫ್ ನರ್ಸ್ ಸೇರಿದಂತೆ ಹಲವು ಹುದ್ದೆಗಳ ಭರ್ತಿಗೆ ಅರ್ಜಿ ಅಹ್ವಾನಿಸಲಾಗಿದೆ. ರಾಷ್ಟ್ರೀಯ ಆರೋಗ್ಯ ಅಭಿಯಾನ ಮತ್ತು ಎಂಎಂ ಅಭೀಮ್ ಕಾರ್ಯಕ್ರಮದ ಅಡಿ ಗುತ್ತಿಗೆ ಆಧಾರದ ಮೇಲೆ ಈ ಹುದ್ದೆ ನೇಮಕಾತಿ ನಡೆಸಲಾಗುವುದು. ಆಸಕ್ತರು ಕೂಡಲೇ ಅಪ್ಲೈ ಮಾಡಿ.
ಒಟ್ಟು 62 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಬ್ಲಾಕ್ ಎಪಿಡೆಮಿಲೊಜಿಸ್ಟ್ – 1ಸ್ಟಾಫ್ ನರ್ಸ್ – 45ಆಡಿಯೋಮೆಟ್ರಿಲ್ ಅಸಿಸ್ಟೆಂಟ್ – 1ಇನ್ಸ್ಟ್ರಕ್ಟರ್- 1ಡಿಸ್ಟಿಕ್ ಕೋ ಆರ್ಡಿನೇಟರ್ – 1ಜೂನಿಯರ್ ಹೆಲ್ತ್ ಅಸಿಸ್ಟೆಂಟ್ – 12ಕ್ಲೋಸ್ ಅಡ್ವೈಸರ್ - 1
ವಿದ್ಯಾರ್ಹತೆ: ಅಭ್ಯರ್ಥಿಗಳು ಹುದ್ದೆಗೆ ಅನುಗುಣವಾಗಿ ಪದವಿ, ಎಎಸ್ಸಿ, ಬಿಎಸ್ಸಿ ನರ್ಸಿಂಗ್, ಡಿಪ್ಲೊಮಾಮ ಬಿಎಸ್ಸಿ, ಬಿಡಿಎಸ್, ಡಿಪ್ಲೊಮಾ ಪದವಿಯನ್ನು ಹೊಂದಿರಬೇಕು.
ವಯೋಮಿತಿ: ಹುದ್ದೆಗೆ ಅನುಗುಣವಾದ ವಯೋಮಿತಿ ಹೊಂದಿದ್ದು, ಗರಿಷ್ಠ ವಯೋಮಿತಿ 45 ವರ್ಷವಾಗಿದೆ.
ಆಯ್ಕೆ:ಅಭ್ಯರ್ಥಿಗಳನ್ನು ಮೆರಿಟ್, ದಾಖಲಾತಿ ಪರಿಶೀಲನೆ ಮೇರೆಗೆ ಆಯ್ಕೆ ಮಾಡಲಾಗುವುದು.ಈ ಹುದ್ದೆಗೆ ವಾಕ್ ಇನ್ ಇಂಟರ್ವ್ಯೂ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಅಕ್ಟೋಬರ್ 4 ರಂದು ಈ ಕೆಳಗಿನ ವಿಳಾಸದಲ್ಲಿ ವಾಕ್ ಇನ್ ಇಂಟರ್ವ್ಯೂ ನಡೆಯಲಿದೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ ಸಭಾಂಗಣ, ಬಳ್ಳಾರಿ, ಕರ್ನಾಟಕ