ಬೆಂಗಳೂರು: ಸಾಮಾನ್ಯವಾಗಿ ಬೇಸಿಗೆಯಲ್ಲಿ ಏರಿಕೆಯಾಗುವ ನಿಂಬೆಹಣ್ಣಿನ ದರ ಈ ಬಾರಿ ದೊಡ್ಡ ಪ್ರಮಾಣದಲ್ಲಿ ಹೆಚ್ಚಾಗಿದೆ. ಬಿಸಿಲು ಬೇಗೆಯ ನಡುವೆ ನಿತ್ಯ ಬಳಸುವ ದರವೂ ಗ್ರಾಹಕರಿಗೆ ಬಿಸಿಯೇರಿಸಿದೆ. ಮಾರುಕಟ್ಟೆಯಲ್ಲಿ ನಿಂಬೆಹಣ್ಣು ಕಂಡಿತೆಂದು ಖರೀದಿಗೆ ತೆರಳಿದರೆ ದರ ಬಲು ದುಬಾರಿಯಾಗಿದೆ. ನಿಂಬೆವೊಂದಕ್ಕೆ ಸುಮಾರು 8ರಿಂದ 10 ರೂ.ವರೆಗೆ ಮಾರಾಟ ಮಾಡಲಾಗುತ್ತಿದೆ.
ಉದ್ಯೋಗ ಆಕಾಂಕ್ಷಿಗಳೇ ಗಮನಿಸಿ.. BBMPಯಲ್ಲಿ 11,307 ಗ್ರೂಪ್ ಡಿ ಹುದ್ದೆಗಳು ಖಾಲಿ ಇದೆ..! ಇಂದೇ ಅರ್ಜಿ ಸಲ್ಲಿಸಿ
ಸಣ್ಣ ಗಾತ್ರದ ನಿಂಬೆ ಹಣ್ಣು ಮಾತ್ರ ಕಡಿಮೆ ದರಕ್ಕೆ ಲಭ್ಯವಿದೆ. ಬಿಸಿಲ ಬೇಗೆಯ ನಡುವೆ ಗ್ರಾಹಕರಿಗೆ ಬಿಸಿಯೇರಿಸಿದೆ ನಿತ್ಯ ಬಳಸುವ ನಿಂಬುವಿನ ದರ ಸದ್ಯ ಗರಿಷ್ಠ ದರಲ್ಲಿ ಮಾರಾಟ ಮಾಡಲಾಗುತ್ತಿದೆ. ಉತ್ತಮ ಗುಣಮುಟ್ಟದ ನಿಂಬೆ ಹಣ್ಣು ಸಿಗುವುದು ಕಡಿಮೆಯಾಗಿದೆ. ಇದರಿಂದ ಅಗತ್ಯದಷ್ಟು ಕೊಳ್ಳಲೂ ಆಗದೇ ಬಿಡಲೂ ಆಗದೇ ಗ್ರಾಹಕರು ಪರಿತಪಿಸುವಂತಾಗಿದೆ.