ಬೆಂಗಳೂರು:- ಬೆಂಗಳೂರು ಜನರಿಗೆ ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆ ಬಿಸಿ ತಟ್ಟಲಿದೆ. ಟಿಕೆಟ್ ದರ ಏರಿಕೆಗೆ ಬಿಎಂಆರ್ಸಿಎಲ್ ಒಪ್ಪಿಗೆ ಸೂಚಿಸಿದ್ದು, ಘೋಷಣೆಯೊಂದೇ ಬಾಕಿ ಇದೆ.
ಮಕ್ಕಳ ಬಟ್ಟೆಗಳನ್ನು ರಾತ್ರಿ ವೇಳೆ ಒಣಗಿಸುತ್ತಿದ್ದೀರಾ!? ಹಾಗಿದ್ರೆ ಈ ನೀವು ನೋಡಲೇಬೇಕು!
ಕಳೆದ 8 ವರ್ಷಗಳಿಂದ ನಮ್ಮ ಮೆಟ್ರೋ ಟಿಕೆಟ್ ದರ ಹೆಚ್ಚಳವಾಗಿಲ್ಲ. ಹೀಗಾಗಿ, ಈ ವರ್ಷ ಟಿಕೆಟ್ ದರ ಏರಿಕೆ ಮಾಡಲೇಬೇಕು ಎಂದು ಬಿಎಂಆರ್ಸಿಎಲ್ ಚಿಂತನೆ ನಡೆಸಿತ್ತು. ಇದಕ್ಕಾಗಿ ಸಮಿತಿ ರಚನೆ ಮಾಡಿ ಸಾಧ್ಯತೆಗಳು, ತಜ್ಞರ ಅಭಿಪ್ರಾಯ ಸಂಗ್ರಹ ಮಾಡಿತ್ತು. ಸಮಿತಿಯ ಜತೆ ಬಿಎಂಆರ್ಸಿಎಲ್ ಶುಕ್ರವಾರ ಸಭೆ ನಡೆಸಿದ್ದು, ದರ ಏರಿಕೆಗೆ ಒಪ್ಪಿಗೆ ಸೂಚಿಸಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಬಿಎಂಟಿಸಿ ಟಿಕೆಟ್ ದರವನ್ನು ಶೇಕಡ15ರಷ್ಟು ಹೆಚ್ಚಿಸಿದ ಬೆನ್ನಲ್ಲೇ ಬೆಂಗಳೂರು ನಗರದ ಮತ್ತೊಂದು ಪ್ರಮುಖ ಸಾರಿಗೆ ಸಂಪರ್ಕ ಸಾಧನವಾಗಿರುವ ಮೆಟ್ರೋ ಟ್ರೈನು ಪ್ರಯಾಣದ ದರ ಹೆಚ್ಚಿಸಲು ಬಿಎಂಆರ್ಸಿಲ್ ಸಿದ್ದತೆಗಳನ್ನು ಮಾಡಿಕೊಂಡಿದೆ.
ಇವತ್ತು ನಗರದಲ್ಲಿ ನಡೆದ ಬೋರ್ಡ್ ಮೀಟಿಂಗ್ ನಲ್ಲಿ ಸಂಸ್ಥೆಯ ದರ ಏರಿಕೆ ಸಮಿತಿ ನೀಡಿದ ಶಿಫಾರಸ್ಸುಗಳನ್ನು ಮಂಡಳಿಯ ಮುಂದೆ ಮಂಡಿಸಲಾಗಿದ್ದು ದರ ಹೆಚ್ಚಳಕ್ಕೆ ಅನುಮೋದನೆ ಸಿಕ್ಕಿದೆ ಎಂದು ಬಿಎಂಆರ್ಸಿಎಲ್ ಹಿರಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶ್ವಂತ್ ಚೌಹಾನ್ ಹೇಳಿದ್ದಾರೆ.