ಕೆಆರ್ ಪುರ:- ನಗರದ ಹೊರವಲಯದ ಕೆ.ಆರ್ ಪುರ ಕ್ಷೇತ್ರದ ಗೆದ್ದಲಹಳ್ಳಿಯಲ್ಲಿರುವ ಪ್ರೇಸ್ಟೀಜ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಸ್ತು ಪ್ರದರ್ಶನ ನಡೆಯಿತು.
ತಂತ್ರಜ್ಞಾನ, ವಿಜ್ಞಾನದ ಆವಿಷ್ಕಾರಗಳು, ಪ್ರಾಕೃತಿಕ ಸಂಪತ್ತು ರಕ್ಷಣೆ, ಐತಿಹಾಸಿಕ ಸ್ಥಳಗಳು, ಬಣ್ಣಗಳ ವರ್ಗೀಕರಣ, ಬೆಳಕಿನ ಶಕ್ತಿ ಬಳಕೆ, ಗಾಳಿ, ನೀರಿನ ಮಿತ ಬಳಕೆ, ಪ್ರಾಣಿ ಪಕ್ಷಿಗಳ ಸಂರಕ್ಷಣೆ, ಹಸಿರು ಯೋಜನೆ , ಆಹಾರ ಪದ್ದತಿ, ಆಧುನಿಕ ಮನುಷ್ಯರ ಜೀವನ ಶೈಲಿ, ಯಂತ್ರಗಳ ಬಳಕೆ, ಸೋಲಾರ್ ವಿದ್ಯುತ್ ತಯಾರಿಕೆ, ಬಯೋ ಗ್ಯಾಸ್ ನಿರ್ವಹಣೆ, ಹನಿ ನೀರಾವರಿ ಬಳಕೆ, ಟೆರೇಸ್ ಗಾರ್ಡನ್, ಟ್ರಾಫಿಕ್ ಸಿಗ್ನಲ್ ನಿರ್ವಹಣೆ, ನೀರಿನ ಮರುಬಳಕೆ ಇನ್ನೂ ಮುಂತಾದ ಮಾದರಿಗಳನ್ನು ತಯಾರಿಸಿ ಅವುಗಳ ಬಗ್ಗೆ ಪೋಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಶಾಲಾ ಮಕ್ಕಳೇ ತಯಾರಿಸಿದ ವಿಜ್ಞಾನ ವಸ್ತು ಪ್ರದರ್ಶನವನ್ನ ಉದ್ಘಾಟನೆ ಮಾಡಿ ಮಾತನಾಡಿದ ಪ್ರೇಸ್ಟೀಜ್ ಇಂಟರ್ ನ್ಯಾಶನಲ್ ಶಾಲೆ ಸಂಸ್ಥಾಪಕ
ಆಂಜಿನಪ್ಪನವರು, ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ಪಠ್ಯದ ಜತೆಗೆ ಕೃಷಿ, ವಿಜ್ಞಾನದಂಥ ಚಟುವಟಿಕೆಗಳಲ್ಲಿ ತೊಡಗಿಸಿ, ಜ್ಞಾನ ನೀಡಬೇಕು. ಇದರಿಂದ ಮೌಲ್ಯಗಳು ಬೆಳೆಯುವ ಜತೆಗೆ ಕೌಶಲವೂ ವೃದ್ಧಿಯಾಗುತ್ತದೆ ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನದ ಬೆಳವಣಿಗೆ ಹೆಚ್ಚುತ್ತಿರುವುದರಿಂದ ವಿದ್ಯಾರ್ಥಿಗಳು ವಿಜ್ಞಾನ ಕ್ಷೇತ್ರದತ್ತ ಒಲವು ತೋರಿಸಿ ಕುತೂಹಲ ಮತ್ತು ಪ್ರಶ್ನಿಸುವ ಗುಣವನ್ನು ಬೆಳೆಸಿಕೊಳ್ಳಬೇಕು.ಮುಂದಿನ ದಿನಗಳಲ್ಲಿ ವಿಜ್ಞಾನದಿಂದ ಜಗತ್ತು ನಡೆಯುವುದರಿಂದ ವಿದ್ಯಾರ್ಥಿಗಳು ವಿಜ್ಞಾನ ಕ್ರೇತ್ರದ ಕಡೆ ಆಸಕ್ತಿ ವಹಿಸಬೇಕು ಎಂದು ಸಲಹೆ ನೀಡಿದರು.
ಸಾಮಾಜೀಕ, ಆರ್ಥಿಕ, ಮಾಹಿತಿ ತಂತ್ರಜ್ಞಾನ, ಕೃಷಿ, ವಿಜ್ಞಾನ ಮುಂತಾದ ಕ್ಷೇತ್ರದಲ್ಲಿನ ಸಂಶೋಧನೆ ಮತ್ತು ಬಳಕೆ ಮತ್ತು ಕುತೂಹಲಕಾರಿ ವಿಷಯಗಳನ್ನು ಮಕ್ಕಳಿಗೆ ತಿಳಿಸುವ ಉದ್ದೇಶದಿಂದ ವಿಜ್ಞಾನ ಪ್ರದರ್ಶನ ಏರ್ಪಡಿಸಲಾಗಿದೆ ಎಂದರು.
ಸೃಜನಾತ್ಮಕ ಚಟುವಟಿಕೆ ಜ್ಞಾನ ವೃದ್ಧಿಸಲಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಮಾನಸಿಕ ಮತ್ತು ದೈಹಿಕ ಸದೃಢತೆಗೆ ಒತ್ತು ನೀಡಬೇಕು. ಮಕ್ಕಳಲ್ಲಿ ಅಡಗಿರುವ ಉತ್ತಮ ಪ್ರತಿಭೆ ಹೊರತರಲು ಪ್ರಾಯೋಗಿಕ ಕಲಿಕೆ ನೆರವಾಗುತ್ತವೆ ಎಂದು ತಿಳಿಸಿದರು.