ಬಾಗಲಕೋಟೆ: ಸಮಾಜದಲ್ಲಿ ಅಪೌಷ್ಟಿಕತೆಯಿಂದ ಕೂಡಿದ ಮಕ್ಕಳನ್ನು ಸಶಕ್ತರನ್ನಾಗಿ ಮಾಡಿ ಆ ಮೂಲಕ ಸದೃಢ ಸಮಾಜ ಸ್ಥಾಪಿಸಲು ಸರಕಾರ ರಾಜ್ಯದಲ್ಲಿ ಕ್ಷೀರಭಾಗ್ಯ ಯೋಜನೆ ಜಾರಿಗೆ ತಂದಿದೆ. ಆದ್ರೆ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಸೂಳಿಕೇರಿ ಗ್ರಾಮದಲ್ಲಿ ಸರ್ಕಾರದ ಮಹತ್ವ ಪೂರ್ಣ ಯೋಜನೆಗೂ ಕನ್ನ ಹಾಕಲಾಗುತ್ತಿದೆ. ಅಕ್ಟೋಬರ್ 4 ರಂದು ಸೂಳಿಕೇರಿ ಗ್ರಾಮದಲ್ಲಿ ಬುಲೆರೋ ಗೂಡ್ಸ್ ವಾಹನದಲ್ಲಿ ಹಾಲಿನ ಪೌಡರ್,ರಾಗಿ ಹಿಟ್ಟು,ಅಡುಗೆ ಎಣ್ಣೆ ಸಾಗಿಸಲು ಮುಂದಾಗಿದ್ದ ಸಿದ್ದಪ್ಪ ಕಿತ್ತಲಿಯನ್ನು ಬಂಧಿಸಿದ್ದರು.
ವಿಚಾರಣೆಯಲ್ಲಿ ಸಿದ್ದಪ್ಪ ತಾನು ಯಾವ ಯಾವ ಸರಕಾರಿ ಶಾಲೆಯಿಂದ ಹಾಲಿನ ಪ್ಯಾಕೆಟ್ ಪಡೆದಿದ್ದೆ ಎಂದು ಬಾಯಿ ಬಿಟ್ಟಿದ್ದಾನೆ. ಆತನ ಹೇಳಿಕೆ ಮೇರೆಗೆ ಬಾಗಲಕೋಟೆ ಸಿಇಎನ್ ಠಾಣೆ ಪೊಲೀಸರು ಹುನಗುಂದ ಬಾದಾಮಿ, ಬಾಗಲಕೋಟೆ ಮೂರು ತಾಲೂಕಿನ ಸರಕಾರಿ ಶಾಲೆಗಳು 127ಕ್ಕೂ ಅಧಿಕ ಮುಖ್ಯ ಶಿಕ್ಷಕರಿಗೆ ವಿಚಾರಣೆಗೆ ಹಾಜರಾಗಲು ಪೊಲೀಸರು ನೊಟೀಸ್ ನೀಡಿದ್ದಾರೆ.
Free Gas Scheme: ಈ ಮಹಿಳೆಯರಿಗೆ ಕೇಂದ್ರ ಸರ್ಕಾರದಿಂದ ಸಿಗಲಿದೆ ಉಚಿತ LPG ಗ್ಯಾಸ್..! ಇಂದೇ ಅರ್ಜಿ ಸಲ್ಲಿಸಿ
ಆರೋಪಿ ಸಿದ್ದಪ್ಪ ಕಿತ್ತಲಿ 4475 ಕೆಜಿ ಹಾಲಿನ ಪುಡಿ ಪಾಕೇಟ್, 325 ಕೆಜಿ ರಾಗಿ ಹಿಟ್ಟು, 50 ಕೆಜಿ ಅಡುಗೆ ಎಣ್ಣೆ ಪಾಕೇಟ್ ಗಳನ್ನು ಸಂಗ್ರಹ ಮಾಡಿ, ಒಂದು ಬೊಲೆರೋ ವಾಹನದಲ್ಲಿ ಮಹಾರಾಷ್ಟ್ರಕ್ಕೆ ಸಾಗಿಸ್ತಿದ್ದ. ಸದ್ಯ 127ಕ್ಕೂ ಅಧಿಕ ಶಿಕ್ಷಕರಿಗೆ ನೊಟೀಸ್ ನೀಡಿದ ಪೈಕಿ ಕೇವಲ 27 ಜನ ಮುಖ್ಯಶಿಕ್ಷಕರು ಮಾತ್ರ ವಿಚಾರಣೆಗೆ ಹಾಜರಾಗಿದ್ದಾರೆ.
ಮಕ್ಕಳ ಹಾಲಿಗೆ ಕನ್ನ ಹಾಕಿದ ಪ್ರಕರಣ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಸದ್ಯ ಒಟ್ಟು 18 ಲಕ್ಷ ಮೌಲ್ಯದ ಸರ್ಕಾರಿ ಯೋಜನೆಯಲ್ಲಿ ಹಂಚಿಕೆಯಾಗಿದ್ದ ಪದಾರ್ಥ ವಶಕ್ಕೆ ಪಡೆದಿದ್ದಾರೆ. ಸಿದ್ದಪ್ಪ ಕಿತ್ತಲಿ, ಶ್ರೀಶೈಲ್ ಅಂಗಡಿ ಕೆಳಗೆ ಉಪಗುತ್ತಿಗೆದಾರನಾಗಿದ್ದನು. ಅಕ್ರಮವಾಗಿ ಈ ದಾಸ್ತಾನನ್ನು ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದನು. ಈ ಹಿನ್ನೆಲೆಯಲ್ಲಿ ಶ್ರೀಶೈಲ ಅಂಗಡಿ ವಿರುದ್ಧ ಎಫ್ಐಆರ್ ದಾಖಲಾಗಿದೆ.