ವಿಮಾನದಲ್ಲಿ ಪ್ರಯಾಣಿಸಬೇಕು ಎಂಬ ಆಸೆ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ. ಆದರೆ ಎಲ್ಲರಿಗೂ ಆ ಆಸೆ ಈಡೇರದು ಈ ಕಾಲದಲ್ಲೂ ವಿಮಾನ ಪ್ರಯಾಣ ಗಗನ ಕುಸುಮವಾಗಿರುವಾಗ ಮಾಗಡಿಯ ತಿಪ್ಪಸಂದ್ರ ಹೋಬಳಿ ವಿದ್ಯಾರ್ಥಿಗಳು ಶ್ರೀ ರಾಮಾಯಣ ಪುಸ್ತಕ ಓದಿ ಪರೀಕ್ಷೆ ಬರೆದು ಉತ್ತೀರ್ಣರಾಗಿ ಹುಳ್ಳೇನಹಳ್ಳಿ ರೇಣುಕಮ್ಮ ಟ್ರಸ್ಟ್ನ ಮೂಲಕ ಉಚಿತ ವಿಮಾನಯಾನದ ಮೂಲಕ ಅಯೋಧ್ಯೆಗೆ ತೆರಳಿ ಶ್ರೀ ರಾಮಮಂದಿರ ನೋಡಿ ಸಂಭ್ರಮಿಸಿದ್ದು ವಿಶೇಷ.
ಕೋಶ ಓದಬೇಕು ದೇಶ ಸುತ್ತಬೇಕು ಎಂಬ ನುಡಿಗಟ್ಟಿನಂತೆ ತಿಪ್ಪಸಂದ್ರ ಹೋಬಳಿಯ ರೇಣುಕಮ್ಮ ಟ್ರಸ್ಟ್ನ ಅಧ್ಯಕ್ಷ ಹಾಗೂ ಬಿಎಸ್ಎನ್ಎಲ್ ನಿಗಮದ ಮಾಜಿ ನಿರ್ದೇಶಕ ಉದ್ಯಮಿ ಎಚ್.ಆರ್ ಮಂಜುನಾಥ್ ರವರ ತಾಯಿ ನಿಧನದ ಬಳಿಕ ತಾಯಿಯ ಸೇವಾ ಕಾರ್ಯವನ್ನು ಮುಂದುವರಿಸುವ ಕೆಲಸಮಾಡಿ ಟ್ರಸ್ಟ್ ಸ್ಥಾಪಿಸಿ ಮಹಿಳಾ ಸಬಲೀಕರಣಕ್ಕೆ ಶ್ರಮಿಸುತ್ತಿದ್ದರು.
ಇನ್ಮುಂದೆ Accident ಆದ್ರೆ ತಲೆ ಬಿಸಿ ಮಾಡ್ಕೊಬೇಡಿ..! ಮೋದಿ ಸರ್ಕಾರವೇ ಭರಿಸಲಿದೆ ಚಿಕಿತ್ಸಾ ವೆಚ್ಚ..!
ಕಳೆದ ವರ್ಷ ತಿಪ್ಪಸಂದ್ರ ಹೋಬಳಿ ಮಕ್ಕಳಿಗೆ ದೇಶದ ಧರ್ಮಗ್ರಂಥಗಳನ್ನು ಓದಿಸುವ ಪ್ರಯತ್ನಕ್ಕೆ ಕೈ ಹಾಕಿ ತಿಪ್ಪಸಂದ್ರ ಹೋಬಳಿ ಮಕ್ಕಳಿಗೆ ಶ್ರೀ ರಾಮಯಣ ಪುಸ್ತಕವನ್ನು ಉಚಿತವಾಗಿ 1೦೦೦ ಮಕ್ಕಳಿಗೆ ನೀಡಿ, ಪುಸ್ತಕ ಓದಿಸಿ ರಜಾ ದಿನದಲ್ಲಿ ಪರೀಕ್ಷೆ ನಡೆಸಿ ಸಂಕೀಘಟ್ಟ ಗ್ರಾಮದಲ್ಲಿ ಸಮಾರಂಭ ಆಯೋಜಿಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ 26 ಮಕ್ಕಳಿಗೆ ಪದಕ ವಿತರಿಸಿ ಪೋಷಕರ ಒಪ್ಪಿಗೆ ಪಡೆದು 7 ತಿಂಗಳ ಬಳಿಕ ವಿಮಾನದಲ್ಲಿ ಎರಡು ಕಡೆಯಿಂದ ಟಿಕೆಟ್ ಬುಕ್ಮಾಡಿಸಿ ಅಯೋಧ್ಯಾ ಪ್ರವಾಸ ಮಾಡಿಸಿ ಯಶಸ್ವಿಯಾಗಿದ್ದಾರೆ.
ತಿಪ್ಪಸಂದ್ರ ಹೋಬಳಿ ವಿದ್ಯಾರ್ಥಿಗಳ ವಿಮಾನ ಯಾನ ಪ್ರವಾಸಕ್ಕೆ ಸ್ವತಃ ಮಾಜಿ ಡಿಸಿಎಂ ಹಾಗೂ ಶಾಸಕ ಡಾ.ಸಿ.ಎನ್ ಅಶ್ವತ್ಥ ನಾರಾಯಣ,ಮಾಜಿ ಶಾಸಕ ಎ.ಮಂಜುನಾಥ್, ಸಾಮಾಜಿಕ ಕಾರ್ಯಕರ್ತ ಕಾಂತರಾಜು ಮಕ್ಕಳಿಗೆ ಶುಭ ಹಾರೈಸಿ ಕಳುಹಿಸಿದ್ದರು.