ರಾಯಚೂರು:- ಜಿಲ್ಲೆ ಮಾನ್ವಿ ತಾಲ್ಲೂಕಿನ ಕಪಗಲ್ ಬಳಿ ಭೀಕರ ಅಪಘಾತ ಸಂಭವಿಸಿದೆ. ಎಂದಿನಂತೆ ಇಂದು ಖಾಸಗಿ ಶಾಲಾ ವಾಹನದಲ್ಲಿ ಮಾನ್ವಿ ಸುತ್ತಲಿನ ಕಪಗಲ್,ಕುರ್ಡಿ ಸೇರಿ ವಿವಿಧ ಹಳ್ಳಿಗಳ ಪ್ರಾಥಮಿಕ ಶಾಲಾ ಮಕ್ಕಳು ಶಾಲೆಗೆ ಹೊರಟ್ಟಿತ್ತು.
ಈ ವೇಳೆ ಮಾನ್ವಿ ಪಟ್ಟಣದ ಮಾರ್ಗ ಮಧ್ಯೆ ಕಪಗಲ್ ಬಳಿ ರಾಯಚೂರು ಮಾರ್ಗವಾಗಿ ಹೊರಟಿದ್ದ ಕೆಎಸ್ ಆರ್ಟಿಸಿ ಬಸ್ ನಡುವೆ ಡಿಕ್ಕಿಯಾಗಿದೆ. ಅಪಘಾತದ ಹೊಡೆತಕ್ಕೆ ಶಾಲಾ ಬಸ್ ಮುಂಭಾಗ ಛಿದ್ರಛಿದ್ರವಾಗಿದೆ.
ಸಾವಿನ ಭಯದಲ್ಲಿ ನಡುಗಿದ್ದ ರೇಣುಕಾಸ್ವಾಮಿ: ಹಲ್ಲೆಯ ರಣಭೀಕರತೆಗೆ ಸಾಕ್ಷಿಯಾದ ಮುರಿದ ಲಾಠಿ,ರಿಪೀಸ್ ಗಳು!
ಘಟನೆ ನಡೆದ ಸ್ಥಳದಲ್ಲಿ ರಸ್ತೆ ಗುಂಡಿ ಇದೆ. ಅದನ್ನ ತಪ್ಪಿಸಲು ಹೋಗಿ ಕೆಎಸ್ ಆರ್ ಟಿಸಿ ಬಸ್ ಚಾಲಕ ಕಟ್ ಹೊಡೆದಿದ್ದಾನೆ. ಆಗ ಎದುರಿಗೆ ಮಕ್ಕಳನ್ನ ತುಂಬಿಕೊಂಡು ಬರುತ್ತಿದ್ದ ಸ್ಕೂಲ್ ಬಸ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಕೂಲ್ ಬಸ್ನಲ್ಲಿದ್ದ ಮಕ್ಕಳಿಗೆ ಗಂಭೀರ ಗಾಯಗಳಾಗಿವೆ.
ಎರಡು ಮಕ್ಕಳ ಕಾಲುಗಳು ಕಟ್ ಆಗಿದ್ದು, ಇತರೆ ವಿದ್ಯಾರ್ಥಿಗಳಿಗೆ ದೇಹದ ವಿವಿಧ ಭಾಗಗಳಲ್ಲಿ ಗಾಯಗಳಾಗಿವೆ. ಓಟ್ಟು 32 ಮಕ್ಕಳ ಪೈಕಿ 11 ಜನ ಮಕ್ಕಳನ್ನ ರಾಯಚೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.17 ಮಕ್ಕಳನ್ನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಲ್ಕು ಜನರನ್ನ ಮಾನ್ವಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.
ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೂವರ ಸ್ಥಿತಿ ಗಂಭೀರವಾಗಿದೆ. ಘಟನೆ ಬಳಿಕ ಇಡೀ ಜಿಲ್ಲಾಡಳಿತವೇ ರಿಮ್ಸ್ ಆಸ್ಪತ್ರೆಗೆ ಧಾವಿಸಿ ಮಕ್ಕಳ ಆರೋಗ್ಯ ಸ್ಥಿತಿ ವಿಚಾರಿಸಿದೆ. ಮೃತ ಮಕ್ಕಳಿಗೆ ಐದು ಲಕ್ಷ, ಗಂಭೀರವಾಗಿ ಗಾಯಗೊಂಡ ಮಕ್ಕಳಿಗೆ ತಲಾ ಮೂರು ಲಕ್ಷ ಪರಿಹಾರವನ್ನ ಸಿಎಂ ಸೂಚನೆಯಂತೆ ಜಿಲ್ಲಾಧಿಕಾರಿ ನಿತೀಶ್ ಘೋಷಿಸಿದ್ದಾರೆ.
ಘಟನೆಯಲ್ಲಿ ಎರಡು ಕಾಲು ಕಳೆದುಕೊಂಡಿದ್ದ ಏಳು ವರ್ಷದ ಸಮರ್ಥ ಹಾಗೂ ಮತ್ತೋರ್ವ 12 ವರ್ಷದ ಶ್ರೀಕಾಂತ್ ಮೃತಪಟ್ಟಿದ್ದಾರೆ..ದುರಂತ ಅಂದ್ರೆ ಇಬ್ಬರು ಮಕ್ಕಳು ಬಡಕುಟುಂಬದವರು. ಕೂಲಿ ನಾಲಿ ಮಾಡಿ ಮಕ್ಕಳನ್ನ ಓದಿಸುತ್ತಿದ್ರು..ಈ ಇಬ್ಬರು ಮಕ್ಕಳು ತಮ್ಮ ತಂದೆ ತಾಯಿಗೆ ಓಬ್ಬರೋಬ್ಬರೇ ಗಂಡು ಮಕ್ಕಳಾಗಿದ್ರು. ಹೀಗಾಗಿ ಮೃತರ ಕುಟುಂಬಸ್ಥರು ಅಕ್ಷರಶಃ ಕಣ್ಣೀರಿಡ್ತಿದ್ದಾರೆ.