Facebook Twitter Instagram YouTube
    ಕನ್ನಡ English తెలుగు
    Thursday, November 30
    Facebook Twitter Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    ಕನ್ನಡ English తెలుగు
    Facebook Twitter Instagram YouTube
    Ain Live News

    ರೈತರ ಮಕ್ಕಳ ಹೆಚ್ಚಿನ ಹಾಗೂ ಉನ್ನತ ಶಿಕ್ಷಣಕ್ಕೆ ವಿದ್ಯಾರ್ಥಿವೇತನ

    AIN AuthorBy AIN AuthorNovember 14, 2023
    Share
    Facebook Twitter LinkedIn Pinterest Email

    ಎಸ್.ಎಸ್.ಎಲ್.ಸಿ. (SSLC) ಅಥವಾ 10ನೇ ತರಗತಿಯನ್ನು ಪೂರ್ಣಗೊಳಿಸಿದ ನಂತರ ಕರ್ನಾಟಕ ರಾಜ್ಯದ ಯಾವುದೇ ಭಾಗದಲ್ಲಿರುವ ಅಧಿಕೃತವಾಗಿ ನೋಂದಣಿಯಾಗಿರುವ ಶಿಕ್ಷಣ ಸಂಸ್ಥೆಗಳು ಅಥವಾ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಕೋರ್ಸ್‌ಗಳವರೆಗೆ ಪ್ರವೇಶವನ್ನು ಪಡೆದಿರುವ ಕರ್ನಾಟಕ ರಾಜ್ಯದ ರೈತರ ಎಲ್ಲಾ ಮಕ್ಕಳ ಬ್ಯಾಂಕ್‌ಗಳ ಖಾತೆಗಳಿಗೆ ನೇರ ನಗದು ವರ್ಗಾವಣೆ (DBT – Direct Benefit Transfer) ಪದ್ಮತಿಯ ಮೂಲಕ 2022-23ನೇ ಆರ್ಥಿಕ ವರ್ಷದ ಸಾಲಿನಿಂದ ಜಾರಿಗೆ ಬರುವಂತ ಶಿಷ್ಯ ವೇತನದ ಹಣದ ಮೊತ್ತವನ್ನು ವಾರ್ಷಿಕ ಶಿಷ್ಯ ವೇತನ (Scholarship) ರೂಪದಲ್ಲಿ ಒದಗಿಸಲು ಮತ್ತು ಪಾವತಿಸಲು ಸರ್ಕಾರವು ಅನುಮೋದನೆಯನ್ನು ನೀಡಿದೆ.

    ಕೋರ್ಸ್ ನ
    ಹೆಸರು / ವಿಧಗಳು
    ಹುಡುಗರು /
    ಪುರುಷರು
    ಹುಡುಗಿಯರು /
    ಅನ್ಯ ಲಿಂಗದವರು
    ಪದವಿಯ ಮುಂಚೆ
    ಪಿ.ಯು.ಸಿ / ಐ.ಟಿ.ಐ /
    ಮತ್ತು ಡಿಪ್ಲೋಮ
    ₹2,500 ₹3,000
    ಬಿ.ಎ / ಬಿ.ಎಸ್.ಸಿ /
    ಬಿ.ಕಾಂ, ಇತ್ಯಾದಿ
    (ಎಂ.ಬಿ.ಬಿ.ಎಸ್ /
    ಬಿ.ಇ. / ಬಿ.ಟಿಕ್ ಮತ್ತು
    ವೃತ್ತಿಪರ ಕೋರ್ಸ್
    ಗಳನ್ನು ಹೊರತುಪಡಿಸಿ)
    ₹5,000 ₹5,500
    ಎಲ್.ಎಲ್.ಬಿ / ಬಿ.ಫಾರ್ಮ್‌
    ಪ್ಯಾರ ಮೆಡಿಕಲ್ /
    ನರ್ಸಿಂಗ್ ಇತ್ಯಾದಿ.,
    ವೃತ್ತಿಪರ ಕೋರ್ಸ್ ಗಳು
    ₹7,500 ₹8,000
    ಎಂ.ಬಿ.ಬಿ.ಎಸ್ / ಬಿ.ಇ /
    ಬಿ.ಟೆಕ್ ಮತ್ತು ಎಲ್ಲಾ
    ಸ್ನಾತಕೋತ್ತರ ಕೋರ್ಸ್ ಗಳು
    ₹10,000 ₹11,000

    ಕರ್ನಾಟಕ ರಾಜ್ಯದ ಯಾವುದೇ ಭಾಗದಲ್ಲಿ ಉಳುಮೆ ಮಾಡುವಂತಹ / ಕೃಷಿ ಮಾಡುವಂತಹ ಜಮೀನನ್ನು ತನ್ನ ಹೆಸರಿನಲ್ಲಿ ಹೊಂದಿರುವಂತಹ ವ್ಯಕ್ತಿಯ ಮಕ್ಕಳು ಈ ಯೋಜನೆಯ ಉಪಯೋಗವನ್ನು ಪಡೆಯಬಹುದು. ಪೋಷಕ / ಪೋಷಕರ ಜೈವಿಕ ಸಂತತಿ ಮತ್ತು ಕಾನೂನಿನ ಪ್ರಕಾರ ದತ್ತು ಪಡೆದಿರುವ ಮಕ್ಕಳು ಸಹ ಈ ಜೋಜನೆಗೆ ಒಳಪಡುತ್ತಾರೆ. ಒಂದು ಪಕ್ಷ ಯಾವುದೇ ಮಕ್ಕಳಿಗೆ ಪೋಷಕ / ಪೋಷಕರು ಇಲ್ಲದೆ ಇದ್ದ ಸಂದರ್ಭದಲ್ಲಿ, ಈ ಯೋಜನೆಯ ಲಾಭವನ್ನು ಪಡೆಯಲು ಉಳುಮೆ ಮಾಡುವಂತಹ / ಕೃಷಿ ಮಾಡುವಂತಹ ಜಮೀನನ್ನು ಅವರು ಹೊಂದಿರ ಬೇಕಾಗುತ್ತದೆ.

    Demo

    ಷರತ್ತುಗಳು

    1. ಈ ರೈತರ ಮಕ್ಕಳು ಕರ್ನಾಟಕ ರಾಜ್ಯದ ಅನುದಾನದಿಂದ ಪಾವತಿಸುವಂತಹ ಒಂದು ಶಿಷ್ಯವೇತನಕ್ಕೆ ಮಾತ್ರ ಅರ್ಹರಾಗುತ್ತಾರೆ. ಆದರೆ, ಮೆರಿಟ್, ಅರ್ಹತಾ ಪರೀಕ್ಷೆ, ಶೈಕ್ಷಣಿಕ ಪರೀಕ್ಷೆಗಳಲ್ಲಿ ರಾಂಕ್ ಇತ್ಯಾದಿಗಳ ಆಧಾರದ ಮೇಲೆ ಪಡೆಯುವ ಶಿಷ್ಯವೇತನ / ಪ್ರಶಸ್ತಿ (award)/ ಪ್ರತಿಫಲ (reward) – ಇವುಗಳನ್ನು ರೈತರ ಮಕ್ಕಳು ಪಡೆದಿದ್ದರೂ, ಈ ಶಿಷ್ಯವೇತನವನ್ನು ಪಡೆಯಲು ಅರ್ಹರಾಗಿರುತ್ತಾರೆ.
    2. ರೈತರ ಮಕ್ಕಳ ತಂದೆ-ತಾಯಿ ಇಬ್ಬರೂ ಕೃಷಿ ಜಮೀನಿನ ಒಡೆಯರಾಗಿದ್ದರೆ, ಈ ಯೋಜನೆಯಲ್ಲಿ ಒಂದು ಶಿಷ್ಯವೇತನಕ್ಕೆ ಮಾತ್ರ ರೈತರ ಮಕ್ಕಳು ಅರ್ಹರಾಗಿರುತ್ತಾರೆ.
    3. ಈ ಶಿಷ್ಯವೇತನವು ಶಿಕ್ಷಣದ ಯಾವುದೇ ಕೋರ್ಸಿನ ಸೆಮಿಸ್ಟರ್ / ಶೈಕ್ಷಣಿಕ ವರ್ಷಗಳಿಗೆ ಮಿತಿಯಾಗಿರತಕ್ಕದ್ದು.
    4. ಕೋರ್ಸ್‌ನ ಸೆಮಿಸ್ಟರ್ / ಶೈಕ್ಷಣಿಕ ವರ್ಷದಲ್ಲಿ ಅನುತ್ತೀರ್ಣ ಹೊಂದಿ ಪುನ: ಸೆಮಿಸ್ಟರ್‌ ಶೈಕ್ಷಣಿಕ ವರ್ಷದಲ್ಲಿ ವಿದ್ಯಾಭ್ಯಾಸದ ಪುನರಾವರ್ತನೆಯಾದರೆ ಅಥವಾ ಪುನಃ ಪರೀಕ್ಷೆ ತೆಗೆದುಕೊಂಡರೆ ವಿದ್ಯಾರ್ಥಿಗಳು ಶಿಷ್ಯವೇತನವನ್ನು ಪಡೆಯಲು ಅರ್ಹರಾಗಿರುವುದಿಲ್ಲ.
    5. ಈ ಶಿಷ್ಯವೇತನವನ್ನು ಯಾವುದಾದರೂ ಒಂದು ವಿಧದ ಕೋರ್ಸ್‌ಗೆ ನೀಡಲಾಗುವುದು. ಉದಾಹರಣೆಗೆ, ‘A’ ಎಂಬ ಸ್ನಾತಕೋತ್ತರ ಪದವಿಯನ್ನು ಪೂರೈಸಿದ ನಂತರ ‘B’ ಎಂಬ ಸ್ನಾತಕೋತ್ತರ ಕೋರ್ಸ್‌ಗೆ ವಿದ್ಯಾರ್ಥಿಯು ಪ್ರವೇಶ ಪಡೆದಲ್ಲಿ, ಈ ಕೋರ್ಸ್‌ಗೆ ಶಿಷ್ಯವೇತನವನ್ನು ಪಡೆಯಲು ಅರ್ಹವಾಗುವುದಿಲ್ಲ


    Share. Facebook Twitter LinkedIn Email WhatsApp

    Related Posts

    ಕಬ್ಬು ಇಳುವರಿ ಹೆಚ್ಚಿಸಲು ನೆನಪಿಡಬೇಕಾದ ಅಂಶಗಳಾವುವು ಗೊತ್ತಾ?

    November 30, 2023

    PM Kissan Scheme: ಪಿಎಂ ಕಿಸಾನ್ ಸ್ಕೀಮ್ನಲ್ಲಿ 15ನೇ ಕಂತಿನ ಹಣ ಬಂದಿಲ್ಲವೇ: ಹೀಗೆ ಮಾಡಿ ಸಾಕು!

    November 30, 2023

    ರೈತರೇ ಗಮನಿಸಿ: ಬರ ಪರಿಹಾರ ಪಡೆಯಬೇಕಾದರೆ ಈ ID ಹೊಂದಿರಲೇಬೇಕು: ನೋಂದಣಿ ಗಡುವಿಗೆ ನಾಳೆ ಕೊನೇ ದಿನ!

    November 29, 2023

    ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯ ಸೌಲಭ್ಯಕ್ಕಾಗಿ ನೋಂದಾಯಿಸಿ ಸೂಚನೆ!

    November 28, 2023

    ಜಾನುವಾರುಗಳಲ್ಲಿ ರಕ್ತಹೀನತೆ ಸಮಸ್ಯೆ: ಲಕ್ಷಣಗಳು, ಸೂಕ್ತ ಚಿಕಿತ್ಸಾ ವಿಧಾನಗಳ ಕ್ರಮ ಇಲ್ಲಿದೆ!

    November 27, 2023

    ಒಣಗುವ ಪರಿಸ್ಥಿತಿಯಲ್ಲಿದ್ದ ಮೆಣಸಿನಕಾಯಿ ಸೇರಿ ಬಹುತೇಕ ಬೆಳೆಗಳಿಗೆ ಮಳೆ ಆಸರೆ: ಭತ್ತದ ಬೆಳೆ ಮಾತ್ರ ನೆಲಕಚ್ಚಿ ರೈತರಿಗೆ ನಷ್ಟ

    November 26, 2023

    ಕೈಕೊಟ್ಟ ಹಿಂಗಾರು ಮಳೆ: ತೈಲ ಆಧಾರಿತ ಇಂಜಿನ್ ಗಳುಳ್ಳ ಪಂಪ್ ಸೆಟ್ ಗಳ ಖರೀದಿಗೆ ಮುಂದಾದ ರೈತರು!

    November 25, 2023

    Krishnabyregowda: ರೈತರಿಗೆ ಪರಿಹಾರ ನೀಡಲು ಕೇಂದ್ರಕ್ಕೆ ಮನವಿ : ಸಚಿವ ಕೃಷ್ಣಬೈರೇಗೌಡ!

    November 24, 2023

    ಈ ಜಿಲ್ಲೆಯಲ್ಲಿ ರೈತರಿಂದ ಮೀನುಮರಿಗಳ ಬಿತ್ತನೆ: ಲಕ್ಷ ಲಕ್ಷ ಆದಾಯಗಳಿಸುತ್ತಿರುವ ಮೀನು ಕೃಷಿ!

    November 24, 2023

    ಬರ ಘೋಷಣೆಗಷ್ಟೇ ಸೀಮಿತವಾದ ಸರ್ಕಾರದ ಕಾರ್ಯ, ಈವರೆಗೂ ಪರಿಹಾರವಿಲ್ಲ: ರೈತರ ಅಸಮಾಧಾನ!

    November 23, 2023

    ರೈತರು ಬರ ಪರಿಹಾರ ಪಡೆಯಬೇಕಾದರೆ ಈ ID ಹೊಂದಿರಲೇಬೇಕು: ನೋಂದಣಿ ಗಡುವು ನ.30ರವರೆಗೆ ವಿಸ್ತರಣೆ!

    November 22, 2023

    ಕರಿಹೇನು ಮತ್ತು ಬೂದಿ ರೋಗದಿಂದ ಮೆಣಸಿನಕಾಯಿ ಬೆಳೆ ಹಾನಿ: ಕಣ್ಣೀರಿನಲ್ಲಿ ಕೈತೊಳೆಯುವಂತಾದ ರೈತರು!

    November 21, 2023
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ಕೃಷಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.