ನವದೆಹಲಿ: ದುರುಪಯೋಗದ ಹಣ ವಶಪಡಿಸಿಕೊಳ್ಳಬಾರದು ಎಂದರೆ ಹೇಗೆ? ಹಣ ಕದಿಯುವುದರಲ್ಲಿ ಯಾರ ಪಾಲು ಇದೆಯೋ ಅವರು ಸಿಕ್ಕಿಬೀಳುತ್ತಾರೆ ಎಂದು ವಿಪಕ್ಷಗಳಿಗೆ ಪ್ರಧಾನಿ ನರೇಂದ್ರ ಮೋದಿ ಟಾಂಗ್ ಕೊಟ್ಟಿದ್ದಾರೆ. ವಿಪಕ್ಷ ನಾಯಕರ ಹತ್ತಿಕ್ಕಲು ಇ.ಡಿ, ಸಿಬಿಐ ಮತ್ತು ಐಟಿ ಬಳಕೆ ಆರೋಪ ಕುರಿತು ಮಾತನಾಡಿ, ವಿರೋಧ ಪಕ್ಷಗಳು ಇಂತಹ ಕಸವನ್ನು ಎಸೆಯುವ ಪ್ರಯತ್ನ ಮಾಡುತ್ತಿದ್ದಾರೆ.
ಈ ಕಸ ಎಸೆಯುವ ವ್ಯಕ್ತಿಯನ್ನು ಕೇಳಿ, ನೀವು ಹೇಳುತ್ತಿರುವುದಕ್ಕೆ ಪುರಾವೆ ಏನು? ನಾನು ಇಂತಹ ಕಸವನ್ನು ಗೊಬ್ಬರವಾಗಿ ಪರಿವರ್ತಿಸುತ್ತೇನೆ. ಅದರಿಂದ ದೇಶಕ್ಕೆ ಒಂದಿಷ್ಟು ಒಳ್ಳೆಯದನ್ನು ಉತ್ಪಾದಿಸುತ್ತೇನೆ. ಮನಮೋಹನ್ ಸಿಂಗ್ 10 ವರ್ಷ ಅಧಿಕಾರದಲ್ಲಿದ್ದಾಗ 34 ಲಕ್ಷ ರೂ.ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಪ್ರಸ್ತುತ ಕಳೆದ 10 ವರ್ಷಗಳಲ್ಲಿ ಇ.ಡಿ 2,200 ಕೋಟಿ ರೂ.ಗಳನ್ನು ವಶಪಡಿಸಿಕೊಂಡಿದೆ.
Post Office Jobs: 10th ಪಾಸಾಗಿದ್ರೆ ಸಾಕು.! ಅಂಚೆ ಇಲಾಖೆಯಲ್ಲಿ ಕೆಲಸಕ್ಕೆ ಅರ್ಜಿ ಆಹ್ವಾನ – ಇಂದೇ ಅರ್ಜಿ ಸಲ್ಲಿಸಿ
ದುರುಪಯೋಗ ಹಣ ವಶ ಪಡಿಸಿಕೊಳ್ಳಬಾರದು ಎಂದರೆ ಹೇಗೆ? ಹಣ ಕದಿಯುವುದರಲ್ಲಿ ಯಾರ ಪಾಲು ಇದೆಯೋ ಅವರು ಸಿಕ್ಕಿಬಿಳುತ್ತಾರೆ ಎಂದು ತಿಳಿಸಿದ್ದಾರೆ. ಎಸ್ಸಿ-ಎಸ್ಟಿ ಓಬಿಸಿಯನ್ನು ಕತ್ತಲೆಯಲ್ಲಿ ಇಟ್ಟು ಲೂಟಿ ಮಾಡುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಜಾಗೃತಿ ಮೂಡಿಸಬೇಕು. ಸಂವಿಧಾನದ ಮೂಲ ಭಾವನೆ ಮತ್ತು ಅದರ ಗೌರವವನ್ನು ವೋಟ್ ಬ್ಯಾಂಕ್ ರಾಜಕೀಯಕ್ಕೆ ದುರ್ಬಳಕೆ ಮಾಡಲಾಗುತ್ತಿದೆ.
ರಾತ್ರೋರಾತ್ರಿ ಶಿಕ್ಷಣ ಸಂಸ್ಥೆಗಳನ್ನು ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಾಗಿ ಮಾಡಿದರು. ಹಲವು ಯೂನಿವರ್ಸಿಟಿಗಳಿಗೆ ಅಲ್ಪಸಂಖ್ಯಾತ ಮಾನ್ಯತೆ ನೀಡಲಾಯಿತು. ಶಿಕ್ಷಣ ಮತ್ತು ಉದ್ಯೋಗದಲ್ಲಿ ಎಸ್ಟಿ-ಎಸ್ಟಿ ಓಬಿಸಿಗೆ ಮೀಸಲಾತಿ ಇಲ್ಲದಂತೆ ಮಾಡಲಾಯಿತು. ಹಿಂಬಾಗಿಲ ಮೂಲಕ ಮೀಸಲಾತಿ ಕಿತ್ತುಕೊಳ್ಳಲಾಯಿತು. ಈ ಬಾರಿಯ ಕಾಂಗ್ರೆಸ್ ಪ್ರಣಾಳಿಕೆ ನೋಡಿ ಆಶ್ಚರ್ಯಗೊಂಡೆ. ಅದಕ್ಕಾಗಿ ಇದು ಮುಸ್ಲಿಂ ಲೀಗ್ ಮುದ್ರೆ ಪ್ರಣಾಳಿಕೆ ಮೇಲಿದೆ ಎಂದು ಹೇಳಿದೆ ಎಂದಿದ್ದಾರೆ.