ಹುಬ್ಬಳ್ಳಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿಗಳಲ್ಲಿ ಉಪವರ್ಗಗಳನ್ನು ರಚಿಸಿ ದಮನಿತ ಸಮುದಾಯಗಳಿಗೆ ಕೋಟಾ ಕಲ್ಪಿಸಲು ರಾಜ್ಯ ಸರ್ಕಾರಗಳಿಗೆ ಅಧಿಕಾರವಿದೆ ಎಂದು ಸುಪ್ರೀಂ ಕೋರ್ಟ್ ಬಹುಮತದದ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಡೋರ, ಸಮಗಾರ, ಮಾದಿಗ ಸೇರಿದಂತೆ ವಿವಿಧ ಸಮುದಾಯದ ಮುಖಂಡರು ಸಂಭ್ರಮಾಚರಣೆ ಮಾಡಿದರು.
Hair Care: ನಿಮ್ಮ ಕೂದಲು ಬೇಗ ಬೆಳೆಯಬೇಕಾ!?, ಹಾಗಿದ್ರೆ ಈ ಎಣ್ಣೆಯನ್ನು ಹೀಗೆ ಬಳಸಿ!
ನಗರದ ರೈಲ್ವೆ ನಿಲ್ದಾಣ ಬಳಿಯ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸಿಹಿ ಹಂಚಿದ ಮುಖಂಡರು, ರಾಜ್ಯ ಸರ್ಕಾರಗಳಿಗೇ ಸುಪ್ರೀಂ ಕೋರ್ಟ್ ಈ ಅಧಿಕಾರ ನೀಡಿದ್ದು, ಖುಷಿಯ ವಿಚಾರವಾಗಿದೆ ಎಂದರು.
ಎಸ್ಸಿ ಮತ್ತು ಎಸ್ಟಿಯಲ್ಲಿ ಉಪವರ್ಗೀಕರಣ ಮಾಡಿ, ಅಲ್ಲಿನ ಹಿಂದುಳಿದ ಸಮುದಾಯಗಳಿಗೆ ಕೋಟಾ ನೀಡಲು ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳಬುಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಉಪ-ವರ್ಗೀಕರಣವು ರಾಜ್ಯಗಳಿಂದ ಪ್ರಮಾಣೀಕರಿಸಬಹುದಾದ ದತ್ತಾಂಶಗಳ ಮೂಲಕ ಸಮರ್ಥಿಸಿಕೊಳ್ಳುವಂತಿರಬೇಕು. ತನ್ನ ಇಚ್ಛೆಯಂತೆ ರಾಜ್ಯ ಸರ್ಕಾರಗಳು ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂದು ಬಹುಮತದ ತೀರ್ಪಿನಲ್ಲಿ ತಿಳಿಸಲಾಗಿದೆ.
ಮುಖಂಡರಾದ ಮಂಜುನಾಥ ಕೊಂಡಪಲ್ಲಿ, ಗೋವಿಂದ ಬೆಳ್ದೋಣಿ, ನಾಗೇಶ ಕತ್ರಿಮಲ್, ಸತ್ಯನಾರಾಯಣ ಎಂ, ಸೂರ್ಯನಾರಾಯಣ ಕನಮಕ್ಕಲ್, ರವಿ ಕಲ್ಯಾಣಿ, ಮಾರುತಿ ದೊಡ್ಡಮನಿ, ರಂಗನಾಯಕ ತಪೇಲಾ, ಬಸಂತಕುಮಾರ, ಶಂಕರ ಅಜಮನಿ, ವಿಜಯ ಗುಂಟ್ರಾಳ, ದೇವೇಂದ್ರಪ್ಪ ಇಟಗಿ, ಬಸವರಾಜ ತೇರದಾಳ, ಸೋಮಣ್ಣ ಹಂಜಗಿ ಮುಂತಾದವರು ಭಾಗವಹಿಸಿದ್ದರು.