ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಭಾರತದ ಅತಿದೊಡ್ಡ ಬ್ಯಾಂಕಿಂಗ್ ಸಂಸ್ಥೆಗಳಲ್ಲಿ ಒಂದಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಒಟ್ಟು ಬ್ಯಾಂಕ್ ಆಸ್ತಿಗಳ ಪ್ರಕಾರ ವಿಶ್ವದ ಅಗ್ರ 50 ಬ್ಯಾಂಕ್ಗಳಲ್ಲಿ ಸ್ಥಾನ ಪಡೆದಿದೆ. ಈ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ವಿವಿಧ ರೀತಿಯ ಠೇವಣಿ ಸೌಲಭ್ಯಗಳನ್ನು ನೀಡುತ್ತದೆ. ಈ ಬ್ಯಾಂಕ್ನಲ್ಲಿ ಹಣ ಠೇವಣಿ ಇರಿಸಲು ಭಾರತೀಯರು ಮೊದಲ ಆದ್ಯತೆ ನೀಡುತ್ತಾರೆ. ಆದ್ರೆ ಎಸ್ಬಿಐ ತನ್ನ ಗ್ರಾಹಕರಿಗೆ ಇಂದು ಬಿಗ್ ಶಾಕ್ ನೀಡಿದೆ.
Pomegranate Juice: ದಿನಕ್ಕೊಂದು ಗ್ಲಾಸ್ ದಾಳಿಂಬೆ ಜ್ಯೂಸ್ ಕುಡಿಯುವುದರಿಂದ ಈ ಕಾಯಿಲೆಗಳು ಹತ್ತಿರವೂ ಸುಳಿಯಲ್ಲ!
ಸರ್ಕಾರಿ ಬ್ಯಾಂಕ್ ವಿವಿಧ ಸಾಲಗಳನ್ನು ದುಬಾರಿ ಮಾಡಲು ಘೋಷಿಸಿದೆ. ಇಂದಿನಿಂದಲೇ ಹೆಚ್ಚಿದ ಬಡ್ಡಿ ದರಗಳು ಜಾರಿಗೆ ಬಂದಿವೆ. ಒಂದು ತಿಂಗಳ ಅವಧಿಯಲ್ಲಿ ಎಸ್ಬಿಐ ತನ್ನ ಎಂಸಿಎಲ್ಆರ್ ದರಗಳನ್ನು ಹೆಚ್ಚಿಸುತ್ತಿರುವುದು ಇದು ಎರಡನೇ ಬಾರಿ. ಜೂನ್ ತಿಂಗಳ ಮಧ್ಯಭಾಗದಲ್ಲಿ ಎಸ್ಬಿಐ ಒಂದು ವರ್ಷದ ಸಾಲದ ಅವಧಿಗೆ ಎಂಸಿಎಲ್ಆರ್ ದರಗಳನ್ನು ಶೇ. 8.65ರಿಂದ ಶೇ. 8.75ಕ್ಕೆ ಹೆಚ್ಚಿಸಿತ್ತು. ಅಂದರೆ ಹತ್ತು ಬೇಸಿಸ್ ಪಾಯಿಂಟ್ಗಳಷ್ಟು ಹೆಚ್ಚಿಸಿತ್ತು.
- ಒಂದು ವರ್ಷದ ಸಾಲ ಅವಧಿಯ ಮೇಲೆ ಎಂಸಿಎಲ್ಆರ್ ದರವನ್ನು 10 ಮೂಲಾಂಕಗಳಷ್ಟು ಹೆಚ್ಚಿಸಿದೆ. ಶೇ. 8.75ರಷ್ಟಿದ್ದ ಎಂಸಿಎಲ್ಆರ್ ದರ ಶೇ. 8.85ಕ್ಕೆ ಏರಿಕೆ ಆಗಿದೆ.
- ಎರಡು ವರ್ಷದ ಅವಧಿಯ ಸಾಲದ ಮೇಲೆ ಎಂಸಿಎಲ್ಆರ್ ದರವನ್ನು ಶೇ. 8.85ರಿಂದ ಶೇ. 8.95ಕ್ಕೆ ಏರಿಸಲಾಗಿದೆ
- ಮೂರು ತಿಂಗಳ ಸಾಲದ ಅವಧಿಯ ಎಂಸಿಎಲ್ಆರ್ ದರವನ್ನು ಶೇ. 8.3ರಿಂದ ಶೇ. 8.4ಕ್ಕೆ ಹೆಚ್ಚಿಸಿದೆ.
- ಆರು ತಿಂಗಳ ಸಾಲದ ಅವಧಿಯ ಎಂಸಿಎಲ್ಆರ್ ದರವನ್ನು ಶೇ. 8.65ರಿಂದ ಶೇ. 8.75ಕ್ಕೆ ಹೆಚ್ಚಿಸಲಾಗಿದೆ.
ಏನಿದು ಎಂಸಿಎಲ್ಆರ್ ದರ?
ಎಂಸಿಎಲ್ಆರ್ ಎಂದರೆ ಮಾರ್ಜಿನಲ್ ಕಾಸ್ಟ್ ಆಫ್ ಲೆಂಡಿಂಗ್ ರೇಟ್. ಆರ್ಬಿಐ ಸಾಮಾನ್ಯವಾಗಿ ಇದನ್ನು ನಿಗದಿ ಮಾಡುತ್ತದೆ. ಇದು ಒಂದು ಬ್ಯಾಂಕ್ ಸಾಲ ನೀಡುವಾಗ ಇರಿಸಬೇಕಾದ ಕನಿಷ್ಠ ಬಡ್ಡಿದರ. ಇದಕ್ಕಿಂತ ಕಡಿಮೆ ದರಕ್ಕೆ ಬ್ಯಾಂಕ್ ಸಾಲ ಕೊಡುವಂತಿಲ್ಲ.
ಬ್ಯಾಂಕುಗಳೂ ಕೂಡ ಎಂಸಿಎಲ್ಆರ್ ದರಗಳನ್ನು ಏರಿಸಬಹುದು. ಒಂದು ಬ್ಯಾಂಕ್ ತನ್ನ ಗ್ರಾಹಕರಿಗೆ ಸಾಲ ನೀಡಬೇಕೆಂದರೆ ಹಣ ಬೇಕು. ಎಫ್ಡಿ ಇತ್ಯಾದಿ ಠೇವಣಿ ಮೂಲಕ ಅದು ಸಾರ್ವಜನಿಕವಾಗಿ ಹಣ ಸಂಗ್ರಹಿಸುತ್ತದೆ. ಕೆಲವೊಮ್ಮೆ ಅದು ಆರ್ಬಿಐನಿಂದಲೂ ಅಥವಾ ಬೇರೆ ಮಾರುಕಟ್ಟೆಯಿಂದಲೋ ಫಂಡಿಂಗ್ ಪಡೆಯಬಹುದು. ಇದಕ್ಕೆ ಅದು ವ್ಯಯಿಸುವ ದರವೇ ಎಂಸಿಎಲ್ಆರ್ ಆಗುತ್ತದೆ.
ಬ್ಯಾಂಕ್ ನಿಗದಿಪಡಿಸಿದ ಎಂಸಿಎಲ್ಆರ್ ದರ ಅಥವಾ ಬೆಂಚ್ಮಾರ್ಕ್ ದರದ ಆಧಾರದ ಮೇಲೆ ಸಾಲಗಳಿಗೆ ಬಡ್ಡಿದರ ನಿಗದಿ ಮಾಡಲಾಗುತ್ತದೆ. ಹೀಗಾಗಿ, ಎಂಸಿಎಲ್ಆರ್ ದರ ಹೆಚ್ಚಾದರೆ, ಗೃಹ ಸಾಲದಿಂದ ಹಿಡಿದು ವೈಯಕ್ತಿಕ ಸಾಲದವರೆಗೆ ಎಲ್ಲಾ ಸಾಲಗಳಿಗೂ ಬಡ್ಡಿದರ ಹೆಚ್ಚುತ್ತದೆ.