ಮಧುಮೇಹವನ್ನು ನಿಯಂತ್ರಣದಲ್ಲಿಡುವ ಅನೇಕ ಆಹಾರ ಪದಾರ್ಥಗಳಿವೆ. ಟೈಪ್-2 ಡಯಾಬಿಟಿಸ್ ರೋಗಿಗಳಿಗೆ ಪ್ರಯೋಜನಕಾರಿಯಾದ ನಿರ್ದಿಷ್ಟ ರೀತಿಯ ಆಹಾರವನ್ನು ಹೊಸ ಅಧ್ಯಯನ ಬಹಿರಂಗಪಡಿಸಿದೆ.
‘ಫ್ರಾಂಟಿಯರ್ಸ್ ಇನ್ ನ್ಯೂಟ್ರಿಷನ್’ ನಡೆಸಿದ ಅಧ್ಯಯನದ ಪ್ರಕಾರ, ಪ್ರತಿದಿನ ಆಹಾರದಲ್ಲಿ ರಾಗಿಯನ್ನು ಸೇರಿಸುವ ಜನರ ರಕ್ತದಲ್ಲಿನ ಗ್ಲೂಕೋಸ್ ಮಟ್ಟ 12 ರಿಂದ 15 ಪ್ರತಿಶತದಷ್ಟು ಕಡಿಮೆಯಾಗುತ್ತದೆ ಎನ್ನಲಾಗುತ್ತದೆ. ಇದು ಮಧುಮೇಹ ಮತ್ತು ಮಧುಮೇಹ ಪೂರ್ವ ಎರಡರಲ್ಲೂ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ. ಅಧ್ಯಯನಗಳ ಪ್ರಕಾರ, ಮಧುಮೇಹ ಮತ್ತು ಮಧುಮೇಹ ಪೂರ್ವದಲ್ಲಿ ರಾಗಿ ಸೇವನೆಯು ತುಂಬಾ ಉಪಯುಕ್ತವಾಗಿದೆ ಎಂದು ಸಾಬೀತಾಗಿದೆ. ರಾಗಿ ಗ್ಲೈಸೆಮಿಕ್ ಇಂಡೆಕ್ಸ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ದೇಹದಲ್ಲಿನ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ.
ಪೌಷ್ಟಿಕತಜ್ಞರ ಪ್ರಕಾರ, ಮಧುಮೇಹ ರೋಗಿಗಳು ಪ್ರತಿನಿತ್ಯ ತಮ್ಮ ಆಹಾರದಲ್ಲಿ ರಾಗಿಯನ್ನು ಸಾಧ್ಯವಾದಷ್ಟು ಸೇರಿಸಿಕೊಳ್ಳಬೇಕು. ಗ್ಲೈಸೆಮಿಕ್ ಸೂಚ್ಯಂಕದ ಪ್ರಕಾರ, ಇತರ ಕೆಲವು ಆಹಾರಗಳು ರಕ್ತದಲ್ಲಿನ ಸಕ್ಕರೆಯನ್ನು ತ್ವರಿತವಾಗಿ ಅಥವಾ ನಿಧಾನವಾಗಿ ಹೆಚ್ಚಿಸುತ್ತವೆ. ಆದರೆ ರಾಗಿ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಜೊತೆ ಸಕ್ಕರೆ ಮಟ್ಟವನ್ನು ಹತೋಟಿಗೆ ತರುತ್ತದೆ.
ರಾಗಿಯ ಇತರ ಪ್ರಯೋಜನಗಳು : ರಾಗಿ ಫೈಬರ್ ಮತ್ತು ಇತರ ಪೋಷಕಾಂಶಗಳಿಗೆ ಸಮೃದ್ಧವಾಗಿವೆ. ಇದು ಕ್ಯಾಲ್ಸಿಯಂ ಮತ್ತು ಅಮೈನೋ ಆಮ್ಲಗಳಂತಹ ಖನಿಜಗಳನ್ನು ಹೊಂದಿದೆ. ಸ್ನಾಯುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ರಾಗಿಯನ್ನು ಮುದ್ದೆ ಮಾಡಿ ತಿನ್ನುವುದರ ಜೊತೆಗೆ, ಖಿಚಡಿ, ಪ್ಯಾನ್ಕೇಕ್, ರೊಟ್ಟಿ ಅಥವಾ ಪಿಜ್ಜಾ ಬೇಸ್ ತರ ಮಾಡಿ ತಿನ್ನಬಹುದು.
ಮಧುಮೇಹಿಗಳು ರಕ್ತದಲ್ಲಿನ ಸಕ್ಕರೆಯ ಬಗ್ಗೆ ಜಾಗರೂಕರಾಗಿರಬೇಕು. ಸ್ವಲ್ಪ ನಿರ್ಲಕ್ಷ್ಯ ಮಾಡಿದರೂ ಸಹ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುತ್ತದೆ. ಇದರಿಂದಾಗಿ ಹೃದಯ ಮತ್ತು ಮೂತ್ರಪಿಂಡದ ಕಾಯಿಲೆಗಳು, ಕಣ್ಣಿನ ಸಮಸ್ಯೆಗಳು ಮತ್ತು ಚರ್ಮದ ಸಮಸ್ಯೆಗಳನ್ನು ಉಂಟಾಗುತ್ತವೆ. ಮಧುಮೇಹ ರೋಗಿಗಳು ತಮ್ಮ ಆಹಾರದ ಬಗ್ಗೆ ತುಂಬಾ ಜಾಗರೂಕರಾಗಿರಬೇಕು.