ಚಿತ್ರದುರ್ಗ: ಸವದಿ ನಮ್ಮ ಉತ್ತಮವಾದ ಗೆಳೆಯರು, ರಾತ್ರಿ ನಾನವರ ಜೊತೆ ದೀರ್ಘವಾಗಿ ಮಾತನಾಡಿದ್ದೇನೆ. ಅವ್ರು ಯಾವುದೇ ಕಾರಣಕ್ಕೂ ವಾಪಸ್ ಹೋಗುವ ಪ್ರಶ್ನೆಯೇ ಇಲ್ಲ ಎಂದು ಲಕ್ಷಣ ಸವದಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆ ವಿಚಾರಕ್ಕೆ ಚಿತ್ರದುರ್ಗದಲ್ಲಿ ಸಚಿವ ಡಿ. ಸುಧಾಕರ್ ಪ್ರತಿಕ್ರಿಯೇ ನೀಡಿದ್ದಾರೆ. ಅವರು ಕಾಂಗ್ರೆಸ್ ಸಿದ್ಧಾಂತ ಒಪ್ಪಿ ಇಲ್ಲೇ ಇರ್ತಾರೆ. ಕಾಂಗ್ರೆಸ್ ಪಕ್ಷ ಅವರನ್ನು ಗೌರವದಿಂದ ಕಂಡಿದೆ.
ಇನ್ನೂ ಜಗದೀಶ್ ಶೆಟ್ಟರ್ ಬಿಜೆಪಿ ಅವರಿಗೆ ಟಿಕೆಟ್ ಕೊಡದಿದ್ದಾಗ ಅವ್ರನ್ನ ಗೌರವಿಸಿದ್ದೇವೆ. ಅವ್ರು ಸೋತ್ರೂ ಕೂಡ ಎಂಎಲ್ಸಿ ಮಾಡಿದ್ದಾರೆ. ಆದ್ರೂ ಯಾಕೆ ಹೋದ್ರು ಅಂತಾ ಅವರನ್ನೇ ಕೇಳಬೇಕು. ಸವದಿ ಮಂತ್ರಿ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ರು ಅನ್ನೋದು ಸತ್ಯಕ್ಕೆ ದೂರ ಎಂದು ಹೇಳಿದರು.
ಇನ್ನೂ ಕಾಂಗ್ರೆಸ್ ನಲ್ಲಿ ಡಿಸಿಎಂ ಚರ್ಚೆ ನಡೆದಿರುವ ವಿಚಾರಕ್ಕೆ ಎಲ್ಲವೂ ಸತ್ಯಕ್ಕೆ ದೂರವಾಗಿದ್ದು, ಸಧ್ಯ ನಮ್ಮ ಮುಂದಿರೋದು ಲೋಕಸಭಾ ಚುನಾವಣೆ, ಅದಕ್ಕೆ ಗಮನ ಹರಿಸಿ ನಾವು ಯಶಸ್ವಿಯಾಗುತ್ತೇವೆ ಎಂದರು. ಶಾಸಕ ಟಿ. ರಘುಮೂರ್ತಿ ನಿಗಮ ಂಮಡಳಿಗೆ ಪರಿಗಣಿಸದಂತೆ ಪತ್ರ ಬರೆದ ವಿಚಾರಕ್ಕೆ ರಘು ಮೂರ್ತಿಯವತಿಗೆ ಯಾವುದೇ ಅಸಮಾಧಾನ ಇಲ್ಲ, 2028 ರ ವರೆಗೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇರುತ್ತೆ. ಇದರಲ್ಲಿ ಯಾವುದೇ ಭಯ ಬೇಡ ಎಂದು ಹೇಳಿದರು.