2024ರ ಇರಾನಿ ಕಪ್ ಪಂದ್ಯದಲ್ಲಿ ಮುಂಬೈ ತಂಡದ ಸರ್ಫರಾಝ್ ಖಾನ್ ಅವರು ದ್ವಿಶತಕವನ್ನು ಸಿಡಿಸಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯ ಭಾರತ ತಂಡದಿಂದ ಬಿಡುಗಡೆಯಾಗಿದ್ದ ಸರ್ಫರಾಝ್ ಖಾನ್ ಇರಾನಿ ಕಪ್ ಪಂದ್ಯದಲ್ಲಿ ದ್ವಿಶತಕ ಸಿಡಿಸಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಪಂದ್ಯದ ಎರಡನೇ ದಿನ ಭೋಜನ ವಿರಾಮಕ್ಕೂ ಮುನ್ನ ಬಲಗೈ ಬ್ಯಾಟ್ಸ್ಮನ್ 150 ಎಸೆತಗಳಲ್ಲಿ ಶತಕವನ್ನು ಪೂರ್ಣಗೊಳಿಸಿದ್ದರು. ಆದರೆ, ಟೀ ವಿರಾಮದ ಬಳಿಕ 255 ಎಸೆತಗಳಲ್ಲಿ ಡಬಲ್ ಸೆಂಚುರಿಯನ್ನು ಬಾರಿಸಿದ್ದಾರೆ.
ಇಂಗ್ಲೆಂಡ್ನ ಬ್ಯಾಝ್ಬಾಲ್ ಅನ್ನು ಭಾರತ ಕಾಪಿ ಹೊಡೆದಿದೆ: ಮೈಕಲ್ ವಾನ್
ಬಾಂಗ್ಲಾದೇಶ ವಿರುದ್ದದ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಭಾರತ ತಂಡದಲ್ಲಿ ಸರ್ಫರಾಝ್ ಖಾನ್ ಕೂಡ ಇದ್ದರು. ಆದರೆ, ಕೆಎಲ್ ರಾಹುಲ್ ಅವರು ಭಾರತ ತಂಡದ ಐದನೇ ಕ್ರಮಾಂಕದಲ್ಲಿ ಆಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಫರಾಝ್ ಖಾನ್ಗೆ ಭಾರತ ತಂಡದ ಪ್ಲೇಯಿಂಗ್ XIನಲ್ಲಿ ಅವಕಾಶ ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಇರಾನಿ ಕಪ್ ಆಡಬೇಕೆಂಬ ಸಲುವಾಗಿ ಅವರನ್ನು ಮುಂಬೈ ತಂಡಕ್ಕೆ ಕಳುಹಿಸಿಕೊಡಲಾಗಿದೆ.
ರೆಸ್ಟ್ ಆಫ್ ಇಂಡಿಯಾ ವಿರುದ್ದದ ಪಂದ್ಯದ ಮೊದಲನೇ ದಿನ 139 ರನ್ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದ ವೇಳೆ ಕ್ರೀಸ್ಗೆ ಬಂದಿದ್ದ ಸರ್ಫರಾಝ್ ಖಾನ್ ಅವರು ನಾಯಕ ಅಜಿಂಕ್ಯ ರಹಾನೆ ಅವರೊಂದಿಗೆ 98 ರನ್ಗಳನ್ನು ಕಲೆ ಹಾಕಿದ್ದರು. ಆ ಮೂಲಕ ಆರಂಭಿಕ ದಿನದಾಂತ್ಯಕ್ಕೆ ಮುಂಬೈ ತಂಡ 4 ವಿಕೆಟ್ಗಳ ನಷ್ಟಕ್ಕೆ 237 ರನ್ಗಳನ್ನು ಕಲೆ ಹಾಕಿತ್ತು. ನಂತರ ಎರಡನೇ ದಿನದಾಟವೂ ಈ ಜೋಡಿ ಇನ್ನಷ್ಟು 43 ರನ್ಗಳನ್ನು ಕಲೆ ಹಾಕಿತ್ತು. ಆದರೆ, ನಾಯಕ ಅಜಿಂಕ್ಯಾ ರಹಾನೆ ಅವರು 97 ರನ್ ಗಳಿಸಿ ಕೇವಲ 3 ರನ್ ಅಂತರದಲ್ಲಿ ಶತಕವನ್ನು ತಪ್ಪಿಸಿಕೊಂಡರು.