ಕಾಂತಾರ ಸಿನಿಮಾ ಬಳಿಕ ನಟಿ ಸಪ್ತಮಿ ಗೌಡ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಬಾಲಿವುಡ್ ಸಿನಿಮಾದಲ್ಲೂ ನಟಿಸಿ ಬಂದಿರುವ ಸಪ್ತಮಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಖತ್ ಬ್ಯುಸಿ ಶೆಡ್ಯೂಲ್ ನಡುವೆಯೂ ನಟಿ ಹೊಸ ಫೋಟೋ ಶೂಟ್ ಮಾಡಿಸಿದ್ದಾರೆ.
ನಟಿ ಸಪ್ತಮಿ ಗೌಡ ಸಿಕ್ಕಾಪಟ್ಟೆ ಸ್ಲಿಮ್ ಆಗಿದ್ದಾರೆ. ನ್ಯೂ ಲುಕ್ನಲ್ಲಿ ನಟಿ ಫೋಟೋ ಶೂಟ್ ಮಾಡಿಸಿದ್ದು ನಟಿಯ ಲುಕ್ ಗೆ ಫ್ಯಾನ್ಸ್ ಕ್ಲೀನ್ ಬೋಲ್ಡ್ ಆಗಿದ್ದಾರೆ. ಮೆರೂನ್ ಕಲರ್ ಡಿಸೈನರ್ ಲೆಹಂಗಾ ತೊಟ್ಟ ಸಪ್ತಮಿ ಗೌಡ ಫೋಟೋಗಳು ಇದೀಗ ಇನ್ಸ್ಟಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಲೆಹಂಗಾ ಧರಿಸಿದ ಸಪ್ತಮಿ ಗೌಡ ಟ್ರೆಡಿಷನ್ ಲುಕ್ ಕೊಡುವ ಜ್ಯುವೆಲ್ಲರಿ ಧರಿಸಿದ್ದಾರೆ. ಸಖತ್ ಪೋಸ್ ಕೊಟ್ಟ ನಟಿಯ ಫೋಟೋಗಳಿಗೆ ಲೈಕ್ಗಳ ಸುರಿಮಳೆ ಆಗಿದೆ.
ಸಾಲು ಸಾಲು ಸಿನಿಮಾಗಳಲ್ಲಿ ಕಾಂತಾರ ಲೀಲಾ ಫುಲ್ ಬ್ಯುಸಿ ಆಗಿದ್ದಾರೆ. ಕಾಂತಾರ ಸಿನಿಮಾ ಹಿಟ್ ಆದ ಬಳಿಕ ನಟಿ ಸಪ್ತಮಿ ಗೌಡ ಸಹ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚಿದ್ದಾರೆ. ಕಾಂತಾರ ಪ್ರೀಕ್ವೆಲ್ ನಲ್ಲೂ ನೀವೇ ನಾಯಕಿಯಾಗ್ಬೇಕು ಎನ್ನುತ್ತಿದ್ದಾರೆ ಅಭಿಮಾನಿಗಳು.
ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾ ಮೂಲಕ ನಟಿ ಸಪ್ತಮಿ ಗೌಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ರು. ನಟ ಡಾಲಿ ಧನಂಜಯ್ ಜೊತೆ ತೆರೆ ಹಂಚಿಕೊಂಡಿದ್ದರು. 2ನೇ ಸಿನಿಮಾ ಕಾಂತಾರ ದಲ್ಲಿ ನಟ ರಿಷಬ್ ಶೆಟ್ಟಿಗೆ ಜೋಡಿಯಾಗಿ ನಟಿಸಿದ ಬಳಿಕ ಸಪ್ತಮಿ ಗೌಡ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ.
ಸದ್ಯ ಸಪ್ತಮಿ ಕೈ ತುಂಬಾ ಸಿನಿಮಾಗಳಿದ್ದು, ಕನ್ನಡಕ್ಕೆ ನನ್ನ ಮೊದಲ ಆದ್ಯತೆ ಎಂದು ಹೇಳಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಕಾಂತಾರ ಲೀಲಾ ಫುಲ್ ಬ್ಯುಸಿ ಆಗಿದ್ದಾರೆ. ಟಾಲಿವುಡ್ ಸಿನಿಮಾ ಶೂಟಿಂಗ್ನಲ್ಲೂ ಸಪ್ತಮಿ ಭಾಗಿಯಾಗಿದ್ದಾರೆ ಎನ್ನಲಾಗ್ತಿದೆ.