ಪುಟ್ಟಗೌರಿ ಧಾರವಾಹಿ ಮೂಲಕ ಗಮನ ಸೆಳೆದ ನಟಿ ಸಾನ್ಯಾ ಅಯ್ಯರ್ ಬಿಗ್ ಬಾಸ್ ಗೆ ಹೋಗಿ ಬಂದ ಬಳಿಕ ಫುಲ್ ಬದಲಾಗಿದ್ದಾರೆ. ಆಗಾಗ ಹೊಸ ಹೊಸ ಫೋಟೋ ಶೂಟ್ ಗಳನ್ನು ಮಾಡಿಸೋ ನಟಿ ಈ ಭಾರಿ ಸಖತ್ ಡಿಫರೆಂಟ್ ಆಗಿ ಕಾಣಿಸಿಕೊಂಡಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 9’ರಲ್ಲಿ ಕಾಣಿಸಿಕೊಂಡಿದ್ದ ನಟಿ ಸಾನ್ಯಾ ಅಯ್ಯರ್ ಇದೀಗ ಹೊಸ ಫೋಟೋ ಶೂಟ್ ಮಾಡಿದ್ದಾರೆ. ಫೋಟೋ ನೋಡಿದ ಪ್ರತಿಯೊಬ್ಬರು ಇದು ನಿಜಕ್ಕೂ ಸಾನ್ಯಾನಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ಸಾನ್ಯಾ ಅಯ್ಯರ್ ಅವರ ಹೊಸ ಫೋಟೋಶೂಟ್ನಲ್ಲಿ ಗುರುತೇ ಸಿಗದಷ್ಟು ಬದಲಾಗಿದ್ದಾರೆ. ಅವರ ಹೇರ್ಸ್ಟೈಲ್ ಸಂಪೂರ್ಣವಾಗಿ ಬದಲಾಗಿದೆ. ಅವರು ಕಣ್ಣಿಗೆ ಕನ್ನಡಕ ಹಾಕಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ಲೈಕ್ಸ್ ಸಿಕ್ಕಿದೆ.
ಕಪ್ಪು ಬಣ್ಣದ ಮಿನಿ ಸ್ಕರ್ಟ್/ಶಾರ್ಟ್ಸ್ ಧರಿಸಿ, ಅದರ ಮೇಲೋಂದು ನ್ಯೂಡ್ ಕಲರ್ ಕ್ರಾಪ್ ಟಾಪ್ ಧರಿಸಿದ್ದಾರೆ. ಅದಕ್ಕೆ ಮ್ಯಾಚ್ ಆಗುವಂತೆ ಫ್ರಂಟ್ ಕಟ್ ಮಾಡಿರೋ ಹೇರ್ ಸ್ಟೈಲ್ ಮಾಡಿಸಿಕೊಂಡು, ಹೈ ಪಾನಿಟೇಲ್ ಕಟ್ಟಿ, ಕಣ್ಣಿಗೊಂದು ದೊಡ್ಡದಾದ ಕನ್ನಡಕ ಹಾಕಿದ್ದಾರೆ.
ಈ ಫೋಟೋನ ಫ್ಯಾನ್ಸ್ ಇಷ್ಟಪಟ್ಟಿದ್ದಾರೆ. ಇದಕ್ಕೆ ಫ್ಯಾನ್ಸ್ ವಿವಿಧ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಅವರನ್ನು ಕೆಲವರು ಹಾಲಿವುಡ್ ಹೀರೋಯಿನ್ಗಳಿಗೆ ಹೋಲಿಕೆ ಮಾಡಿದ್ದಾರೆ.
ಸಾನ್ಯಾ ಅಯ್ಯರ್ ಅವರಿಗೆ ದೊಡ್ಡ ಮಟ್ಟದಲ್ಲಿ ಬೇಡಿಕೆ ಇದೆ. ಅವ ವರು ‘ಗೌರಿ’ ಸಿನಿಮಾ ಮೂಲಕ ಬಿಗ್ ಸ್ಕ್ರೀನ್ ಗೆ ಕಾಲಿಟ್ಟಿದ್ದಾರೆ.ಸದ್ಯ ಸಾಕಷ್ಟು ಕತೆಗಳು ಸಾನ್ಯಾರನ್ನು ಹುಡುಕಿಕೊಂಡು ಬರುತ್ತಿವೆ.