ಬಿಗ್ ಬಾಸ್ ಸೀಸನ್ 9ರ ಸ್ಪರ್ಧಿ ಸಾನ್ಯ ಅಯ್ಯರ್ (Saanya Iyer) ಅವರು ಸದಾ ಒಂದಲ್ಲಾ ಒಂದು ಫೋಟೋಶೂಟ್ ಮೂಲಕ ಸುದ್ದಿಯಲ್ಲಿರುತ್ತಾರೆ. ಇದೀಗ ಸ್ಟೈಲೀಶ್ ಆಗಿ ಸಾನ್ಯ ಕಂಗೊಳಿಸಿದ್ದಾರೆ. ಹೊಸ ಲುಕ್ನಲ್ಲಿ ನಟಿ ಮಿಂಚಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಹಸಿರು ಬಣ್ಣದ ಗೌನ್ನಲ್ಲಿ ಸಾನ್ಯ ಅಯ್ಯರ್ ಮಿಂಚಿದ್ದಾರೆ. ಫಿಶ್ ಕಟ್ನಂತಿರೋ ಡ್ರೆಸ್ ಧರಿಸಿ ಸಾನ್ಯ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಸಾನ್ಯ ಡ್ರೆಸ್ ಅದಕ್ಕೆ ತಕ್ಕಂತಹ ಮೇಕಪ್ ಇವೆಲ್ಲವೂ ಅಭಿಮಾನಿಗಳಿಗೆ ಇಷ್ಟವಾಗಿದೆ. ಸಾನ್ಯರ ನ್ಯೂ ಲುಕ್ ನೋಡಿ ಕನ್ನಡ ಚಿತ್ರರಂಗದಲ್ಲಿ ಮುಂದೆ ಮೆರೆಯುವ ನಟಿ ಎಂದು ಫ್ಯಾನ್ಸ್ ಹಾಡಿ ಹೊಗಳಿದ್ದಾರೆ.
ಕಳೆದ ವರ್ಷ ಸಾನ್ಯ, ಬಿಗ್ ಬಾಸ್ ಒಟಿಟಿ ಸೀಸನ್ 1 ಮತ್ತು ಟಿವಿ ಬಿಗ್ ಬಾಸ್ನಲ್ಲಿ (Bigg Boss Kannada 9) ಕಾಣಿಸಿಕೊಳ್ಳುವ ಮೂಲಕ ಜನಪ್ರಿಯತೆ ಗಳಿಸಿದ್ದರು. ಸಿನಿಮಾ ನಾಯಕಿಯಾಗಬೇಕು ಎಂದು ಕನಸು ಕಂಡಿದ್ದ ನಟಿ ಇದೀಗ ಅದೇ ಹಾದಿಯಲ್ಲಿ ಹೆಜ್ಜೆ ಇಡ್ತಿದ್ದಾರೆ.