ವರ್ತೂರ್ ಸಂತೋಷ್ ಅವರ ವಿಚಾರವಾಗಿ ಸುದೀಪ್ ಬೇಸರಗೊಂಡಿದ್ದಾರೆ. ಈ ವಾರ ವರ್ತೂರ್ ಸಂತೋಷ್ ಅವರು ನಾಮಿನೇಟ್ ಕೂಡ ಆಗಿದ್ದರು. ಆದರೆ ಬರೋಬ್ಬರಿ 34,15, 472 ಮತಗಳು ಬಂದು ಸೇಫ್ ಆಗಿದ್ದಾರೆ. ಆದರೆ ವರ್ತೂರ್ ಅವರು ಕಿಚ್ಚನ ಮುಂದೆ ಮನೆಯಿಂದ ಹೊರ ಹೋಗುವ ತೀರ್ಮಾನ ಮಾಡಿರುವುದಾಗಿ ಹೇಳಿದ್ದಾರೆ. ಕಿಚ್ಚ ಸುದೀಪ್ ಅವರು ಎಷ್ಟೇ ಕನ್ವಿನ್ಸ್ ಮಾಡಿದರೂ ವರ್ತೂರ್ ಕೇಳುವ ಪರಿಸ್ಥಿತಿಯಲ್ಲಿರಲಿಲ್ಲ. ವರ್ತೂರ್ ಅವರ ಈ ನಡೆಗೆ ಪ್ರೇಕ್ಷಕರು ಕೂಡ ಬೇಸರಗೊಂಡಿದ್ದಾರೆ.
ನನಗೆ ಹೊರಗೆ ನಡೆದ ಘಟನೆಯನ್ನು ಮರೆತು ಆಡಬೇಕು ಎಂದು ಇಲ್ಲಿಗೆ ಬಂದೆ. ಆದರೆ ನನಗೆ ಅದರಿಂದ ಹೊರಗೆ ಬರಲು ಸಾಧ್ಯಾಗುತ್ತಿಲ್ಲ. ಹಾಗಾಗಿ ನಾನು ಷೋದಿಂದ ಹೊರಗೆ ಹೋಗಲು ಬಯಸುತ್ತೇನೆ’ ಎಂದು ಹೇಳಿದರು. ಇದರಿಂದ ಎಲ್ಲರಿಗೂ ಶಾಕ್ ಆಯಿತು. ಕಿಚ್ಚ ಕೂಡ, ‘ನೀವು ಜನರ ಪ್ರೀತಿಯ ವಿರುದ್ಧ ಹೋಗ್ತಿದ್ದೀರಾ’ ಎಚ್ಚರಿಸಿದರು. ಕೊನೆಯಲ್ಲಿ, ‘ಮನೆಯೊಳಗೆ ಇರ್ತೀರೋ ಬಿಡ್ತೀರೋ ನಿಮಗೆ ಬಿಟ್ಟಿದ್ದು. ಆದರೆ ನನಗಂತೂ ಡಿಸಪಾಯಿಂಟ್ ಆಗಿದೆ’ ಎಂದು ಹೇಳಿ ಬೇಸರದಿಂದಲೇ ವೇದಿಕೆ ಬಿಟ್ಟು ಹೊರನಡೆದರು. ಇದೀಗ ವರ್ತೂರು ಸಂತೋಷ್ ಅವರನ್ನು ಮನೆಯೊಳಗೆ ಉಳಿದುಕೊಳ್ಳುವಂತೆ ಮನವೊಲಿಸಲು ಇಡೀ ಮನೆಯ ಸದಸ್ಯರೆಲ್ಲರೂ ಪ್ರಯತ್ನಿಸುತ್ತಿದ್ದಾರೆ.
ವರ್ತೂರು ಸಂತೋಷ್ ಮಾತಿಗೆ ಪ್ರತಿಕ್ರಿಯೆ ನೀಡಿದ ಸುದೀಪ್, ‘ಅಂಥದ್ದೇನೂ ಆಗಿಲ್ಲ. ನಿಮ್ಮವರು ಎಲ್ಲರೂ ಚೆನ್ನಾಗಿಯೇ ಇದ್ದಾರೆ. ನೀವು ಚೆನ್ನಾಗಿ ಆಡಬೇಕು ಎಂದು ಎಲ್ಲರೂ ಆಸೆ ಪಡ್ತಾ ಇದ್ದಾರೆ. ಹೊರಗಡೆ ನಿಮ್ಮವರು ಚೆನ್ನಾಗಿಲ್ಲ ಅಂತ ನೀವು ತಲೆ ಇಟ್ಟುಕೊಂಡು ಹೊರಗೆ ಹೋದರೆ, ನೀವು ರಿಗ್ರೇಟ್ ಮಾಡ್ತೀರಿ. ನಿಮ್ಮ ಕುಟುಂಬದವರ ಜೊತೆಗೆ ನಾವು ಟಚ್ನಲ್ಲಿ ಇದ್ದೇವೆ. ನಿಮಗೆ 34 ಲಕ್ಷ ವೋಟ್ ಬಂದಿವೆ. ಅದಕ್ಕೆ ಗೌರವ ನೀಡಬೇಕು. ಇಷ್ಟೊಂದು ಜನ ನಿಮಗೆ ವೋಟ್ ಹಾಕಿದ್ದಾರೆ ಎಂದರೆ, ನಿಮ್ಮನ್ನು ಅವರು ಎಲ್ಲಿ ಕೂರಿಸಿದ್ದಾರೆ ಎಂಬುದು ಯೋಚನೆ ಮಾಡಿ’ ಎಂದು ಸುದೀಪ್ ಹೇಳಿದರು.