ಬಳ್ಳಾರಿ: ಸಂಡೂರು ಉಪಚುನಾವಣಾ ಕಣ ದಿನದಿನಕ್ಕೂ ಕಾವೇರುತ್ತಿದೆ. ಇವತ್ತು ಸಂಡೂರಿನಲ್ಲಿ ನಡೆದ ಎಸ್ಸಿ ಒಳಮೀಸಲಾತಿ ಕುರಿತು ನಡೆದ ದಲಿತ ಸಮಾವೇಶದಲ್ಲಿ ಭಾಗವಹಿಸಿದ ಮಾನ್ಯ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಮಾತನಾಡುತ್ತ ಬಿಜೆಪಿ ಅಭ್ಯರ್ಥಿ ಬಂಗಾರು ಹನಮಂತು ತಮ್ಮ ಸಂತೋಷ್ ಲಾಡ್ ಫೌಂಡೇಶನ್ ಕುರಿತು ಮಾಡಿದ ಆರೋಪಕ್ಕೆ ತೀವ್ರ ತರಾಟೆಗೆ ತೆಗೆದುಕೊಂಡರು.
“ಆಧಾರ ರಹಿತವಾಗಿ ಸುಮ್ಮನೇ ಆರೋಪ ಮಾಡಬೇಡ, ನಾನು ಜನಸೇವೆಗಾಗಿ ಬರೊಬ್ಬರಿ 700 ಕೋಟಿ ಹಣ ವಿನಿಯೋಗಿಸಿದ್ದೇನೆ, ಗಣಿ ರಫಿನಲ್ಲಿ ಕೇವಲ ಟನ್ ಗೆ ₹2 ಪಡೆದಿದ್ದರೂ ಇವತ್ತು ಸಾವಿರಾರು ಕೋಟಿ ಹಣ ಮಾಡಬಹುದಿತ್ತು. ಆದರೆ ನಾನು ಹಾಗೆ ಮಾಡಿಲ್ಲ. ನನ್ನ ಗಣಿಗಳನ್ನು ಸಹ ಜನಸೇವೆಗಾಗಿ ಕಳೆದುಕೊಂಡಿದ್ದೇನೆ.
ರೈತರಿಗೆ ಕೇಂದ್ರದಿಂದ ಮತ್ತೊಂದು ಬಂಪರ್ ಯೋಜನೆ! ಶೇಕಡಾ 50 ರಷ್ಟು ಸಬ್ಸಡಿ ಘೋಷಿಸಿದ ಸರ್ಕಾರ
ಮೊದಲು ಸಂಡೂರಿಗೆ ನಿನ್ನ ಕೊಡುಗೆ ಏನು ಹೇಳು? ಮತಕ್ಕೋಸ್ಕರ ಜನರನ್ನು ದಾರಿ ತಪ್ಪಿಸುವ ವ್ಯರ್ಥ ಪ್ರಯತ್ನ ಮಾಡಬೇಡ, ಅಕ್ರಮ ಗಣಿಗಾರಿಕೆಗಂತಲೇ ಬಿಜೆಪಿಗರು ಸಂಡೂರನ್ನು ಗೆಲ್ಲಲು ಸಂಚು ರೂಪಿಸಿದ್ದಾರೆ, ಸಂಡೂರಿನ ಸಂಪತ್ತನ್ನು ಹಾಳು ಮಾಡಲು ಸಂಡೂರು ಜನತೆ ಯಾವತ್ತಿಗೂ ಅವಕಾಶ ಕೊಡುವುದಿಲ್ಲ, ನಿನಗೆ ಒಳ್ಳೆಯದಾಗಲಿ” ಎಂದು ಖಾರವಾಗಿಯೇ ಸಚಿವ ಲಾಡ್ ಬಿಜೆಪಿ ಅಭ್ಯರ್ಥಿಗೆ ಕ್ಲಾಸ್ ತೆಗೆದುಕೊಂಡರು.