ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿಗಳಲ್ಲಿ ಓರ್ವನಾದ ಶಾಂತನ್ ಚೆನ್ನೈನ ರಾಜೀವ್ ಗಾಂಧಿ ಸರ್ಕಾರಿ ಜನರಲ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಯಕೃತ್ ಸಮಸ್ಯೆಯಿಂದ ಬಳಲುತ್ತಿದ್ದ ಶಾಂತನ್, ರಾಜೀವ್ ಗಾಂಧಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಯಿಂದ ಕೊಂಚ ಚೇತರಿಕೆ ಕಂಡಿದ್ದ ಶಾಂತನ್ ಅವರನ್ನು ತಿರುಚ್ಚಿಯ ಕೇಂದ್ರ ಕಾರಾಗೃಹದ ವಿಶೇಷ ಶಿಬಿರದಲ್ಲಿ ಇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶಾಂತನ್ ನಿಧನರಾಗಿದ್ದಾರೆ.
1990ರಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ತಮಿಳುನಾಡಿನ ಶ್ರೀಪೆರಂಬುದೂರಿನಲ್ಲಿ ಎಲ್ಟಿಟಿಇ ಭಯೋತ್ಪಾದಕಿ ಧನು ಎಂಬ ಆತ್ಮಹತ್ಯಾ ಬಾಂಬರ್ ನಡೆಸಿದ ದಾಳಿಗೆ ಬಲಿಯಾಗಿದ್ದರು. ಬಳಿಕ ಈ ಕೃತ್ಯಕ್ಕೆ ಸಾಥ್ ನೀಡಿ ಪರಾರಿಯಾಗಿದ್ದ ಎಲ್ಟಿಟಿಇ ಉಗ್ರರಾದ ಶಿವರಾಸನ್ ಹಾಗೂ ಶುಭಾರನ್ನು ಬೆಂಗಳೂರಿನ ಕೋಣನಕುಂಟೆಯಲ್ಲಿ ಪೊಲೀಸರು ಹತ್ಯೆ ಮಾಡಿದ್ದರು. ಇನ್ನು ಪೇರರಿವಾಳನ್, ಮುರುಗನ್, ಶಾಂತನ್, ನಳಿನಿ, ರಾಬರ್ಟ್ ಪಿಯಸ್, ಜಯಕುಮಾರ್ ಹಾಗೂ ರವಿಚಂದ್ರನ್- ಸೇರಿದಂತೆ 7 ಅಪರಾಧಿಗಳು ಅವರು 1991 ರಲ್ಲಿ ರಾಜೀವ್ ಹತ್ಯೆಗೆ ಸಂಬಂಧಿಸಿದಂತೆ ಆಜೀವ ಕಾರಾಗೃಹವಾಸ ಅನುಭವಿಸುತ್ತಿದ್ದರು. ಈ ಪೈಕಿ ಕಳೆದ ಮೇನಲ್ಲಿ ಪೇರರಿವಾಳನ್ ರೀಲಿಸ್ ಆಗಿದ್ದ. ಇದೀಗ ಶಾಂತನ್ ನಿಧನರಾಗಿದ್ದಾರೆ.