ಬೆಂಗಳೂರು:- ಸಂಕ್ರಾಂತಿ ಹಬ್ಬದ ಹಿನ್ನೆಲೆ ರಾಜಧಾನಿ ಬೆಂಗಳೂರಿನ ಯಲಹಂಕದ ಕೊಡಿಗೆಹಳ್ಳಿಯಲ್ಲಿ ಶಾಸಕ ಕೃಷ್ಣೆ ಭೈರೇಗೌಡ ಮತ್ತೆ ಧರ್ಮಪತ್ನಿ ಮಿನಾಕ್ಷಿ ನೇತೃತ್ವದಲ್ಲಿ ಸುಗ್ಗಿ ಹುಗ್ಗಿ ಹಬ್ಬ ಆಯೋಜಿಸಲಾಗಿದೆ.
ಸುಗ್ಗಿ ಹುಗ್ಗಿ ಹಬ್ಬ ಜ.13ರಂದು ಉದ್ಘಾಟನೆಗೊಂಡಿದ್ದು, ಇನ್ನು ಎರಡು ದಿನಗಳ ಕಾಲ ನಡೆಯಲಿದೆ. ಸಿಲಿಕಾನ್ ಸಿಟಿಯಲ್ಲಿ ಹಳ್ಳಿಯ ವಾತಾವರಣ ನಿರ್ಮಾಣಗೊಂಡಿದ್ದು, ಹಳ್ಳಿಯ ಸೊಗಡಿನ ಆಟ.. ಎತ್ತುಗಳ ನೋಟ ಕಣ್ಮನಸೆಳೆಯುತ್ತಿದೆ.
ಅದರಲ್ಲೂ ಪುಟ್ಟ ಬಾಲಕರಯ ಮಣ್ಣಿನ ಮಡಿಕೆ ಮಾಡುವ ಸಂಭ್ರಮದಲ್ಲಿ ತೊಡಗಿರುವುದನ್ನು ಕಾಣಬಹುದಾಗಿದೆ.
ಒಲೆಯಲ್ಲಿ ಪೊಂಗಲ್ ಸೇರಿದಂತೆ ಹಳ್ಳಿಯ ಸೊಗಡನ್ನು ಬಿಂಬಿಸುತ್ತಿದೆ ಎಂದು ಹೇಳಬಹುದಾಗಿದೆ.