ಮಾನವೀಯ ಸಂಬಂಧ ಬೆಸೆಯುವ ಉತ್ತರಾಯಣ ಪುಣ್ಯಕಾಲದ ಮಕರ ಸಂಕ್ರಾಂತಿ ಹಬ್ಬವನ್ನು ರಾಜ್ಯದಲ್ಲಿಂದು ಸಡಗರ, ಸಂಭ್ರಮದಿಂದ ಆಚರಿಸಲಾಗುತ್ತದೆ. ಸೂರ್ಯನು ತನ್ನ ಚಲನೆಯನ್ನು ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಪಥವನ್ನು ಬದಲಿಸುವ ದಿನವನ್ನು ದೇಶದಲ್ಲಿ ಮಕರ ಸಂಕ್ರಮಣ ಎಂದು ಆಚರಿಸುತ್ತೇವೆ.
ಈ ಹಬ್ಬವನ್ನು ವಿವಿಧ ರಾಜ್ಯಗಳಲ್ಲಿ ಒಂದೊಂದು ಹೆಸರಿನಲ್ಲಿ ಕರೆಯಲಾಗುತ್ತದೆ. ಕರ್ನಾಟಕದಲ್ಲಿ ಸುಗ್ಗಿ, ತಮಿಳುನಾಡಿನಲ್ಲಿ ಪೊಂಗಲ್, ಕೇರಳದಲ್ಲಿ ಮಕರವಿಳಕ್ಕು ಹಾಗೂ ತೆಲುಗು ರಾಜ್ಯಗಳಾದ ಆಂಧ್ರ, ತೆಲಂಗಾಣದಲ್ಲಿ ಭೋಗಿ ಹಬ್ಬವನ್ನಾಗಿ ಆಚರಿಸುತ್ತಾರೆ.
ಅದರಂತೆ ಆಸ್ಟ್ರೇಲಿಯಾದ ಮಾಜಿ ಆಟಗಾರ ಡೇವಿಡ್ ವಾರ್ನರ್ ಶುಭಾಶಯ ತಿಳಿಸಿರುವುದು ವಿಶೇಷ. ತಮ್ಮ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ವಾರ್ನರ್ ಸಂಕ್ರಾಂತಿ ಹಬ್ಬಕ್ಕೆ ವಿಶಸ್ ತಿಳಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಂಕ್ರಾಂತಿ ಹಬ್ಬದ ಶುಭಾಯಶದ ಫೋಟೋ ಹಂಚಿಕೊಂಡಿರುವ ವಾರ್ನರ್,
Personal Loan: ಗಮನಿಸಿ.. ಪರ್ಸನಲ್ ಲೋನ್ ಪಡೆಯಲು RBI ನಿಂದ ಹೊಸ ರೂಲ್ಸ್.! ಬದಲಾವಣೆ ಏನು ಗೊತ್ತಾ..?
ಸೂರ್ಯನ ಬೆಳಕು ದಾರಿದೀಪವಾಗಲಿ. ಈ ಹಬ್ಬದ ದಿನವು ನಿಮಗೆ ಶಾಂತಿ, ಸಂತೋಷ ಮತ್ತು ಮೆರಗನ್ನು ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ಈ ಪೋಸ್ಟ್ ಅನ್ನು GMR ಸ್ಪೋರ್ಟ್ಸ್ ಹೆಚ್ಒ ವಿಕಾಶ್ ಕುಮಾರ್ ಹಾಗೂ ನಿರಂಜನ್ ಸರೀನ್ ಎಂಬುವರಿಗೆ ಟ್ಯಾಗ್ ಮಾಡಿದ್ದಾರೆ.
ಅಂದಹಾಗೆ ಡೇವಿಡ್ ವಾರ್ನರ್ ಭಾರತೀಯರ ಹಬ್ಬಗಳಿಗೆ ಶುಭಾಶಯ ತಿಳಿಸುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಗಣೇಶ ಚತುರ್ಥಿ ಸಂದರ್ಭದಲ್ಲಿ, ಘ್ನನಿವಾರಕ ಗಣಪನ ಫೋಟೋವನ್ನು ಹಂಚಿಕೊಂಡು ಸರ್ವರಿಗೂ ಶುಭಾಶಯ ತಿಳಿಸಿದ್ದರು.