ದಾಸರಹಳ್ಳಿ: ನಾಡಿನೆಲ್ಲಡೆ ಸಂಕ್ರಾಂತಿ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಬೆಂಗಳೂರು ನಗರದಲ್ಲಿ ಎತ್ತುಗಳ ಕಿಚ್ಚಿನ ಆಚರಣೆ ಮಾಡಲಾಗಿದೆ.
ಚಳಿಗಾಲದಲ್ಲಿ ಎಳನೀರು ಕುಡಿಯುವುದರಿಂದ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ!?
ದಾಸರಹಳ್ಳಿಯ ಮಲ್ಲಸಂದ್ರದಲ್ಲಿ ಹೋರಿಗಳ ಮೆರವಣಿಗೆ ಮಾಡಲಾಗಿದೆ. ಊರಿನ ಮುಖಂಡರ ಜೊತೆ ಶಾಸಕ ಎಸ್ ಮುನಿರಾಜು ಹಬ್ಬ ಆಚರಣೆ ಮಾಡಲಾಗಿದೆ. ಗ್ರಾಮದ ಎತ್ತುಗಳನ್ನ ಸಿಂಗಾರ ಮಾಡಿ ರಸ್ತೆಯಲ್ಲಿ ಮೆರವಣಿಗೆ ಮಾಡಲಾಗಿದೆ. ಮಂಗಳ ವಾದ್ಯದೊಂದಿಗೆ ಎತ್ತುಗಳ ಮೆರವಣಿಗೆ ಮಾಡಲಾಗಿದ್ದು, ಕಿಚ್ಚು ಹಾಯಿಸುವ ಹುಲ್ಲಿಗೆ ಶಾಸಕ ಎಸ್ ಮುನಿರಾಜು ಬೆಂಕಿ ಸ್ಪರ್ಶ ಮಾಡಿದರು.
ಎತ್ತುಗಳ ಜೋತೆ ಹಸು,ಕುರಿಯನ್ನ ಬೆಂಕಿಯಲ್ಲಿ ಹಾರಿಸುವ ಮುಖಾಂತರ ಕಾರ್ಯಕ್ರಮ ನಡೆದಿದ್ದು, ಸಂಕ್ರಾಂತಿ ಕಿಚ್ಚು ನೋಡಲು ಸಾವಿರಾರು ಜನರು ಭಾಗಿಯಾಗಿದ್ದರು.