ಸಾಕಷ್ಟು ದಿನಗಳಿಂದ ರನ್ ಗಳಿಗಾಗಿ ಪರದಾಡುತ್ತಿದ್ದ ಸಂಜು ಸ್ಯಾಮ್ಸನ್ ಅವರು, ಕೊನೆಗೂ ಶತಕದ ಬರ ನೀಗಿಸಿದ್ದಾರೆ.
ಚನ್ನಪಟ್ಟಣ ಅಭ್ಯರ್ಥಿಯನ್ನು ಮುಂದಿನ ವಾರದಲ್ಲಿ ಫೈನಲ್ ಮಾಡ್ತೀವಿ: HD ಕುಮಾರಸ್ವಾಮಿ!
ಭಾರತ ಮತ್ತು ಬಾಂಗ್ಲಾದೇಶದ ನಡುವೆ ನಡೆದ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಟೀಂ ಇಂಡಿಯಾ ದಾಖಲೆಗಳ ಸುರಿಮಳೆಗೈದಿದೆ ಅತಿ ಕಡಿಮೆ ಬೌಲ್ಗೆ ಶತಕ ಸಿಡಿಸಿದ ಸಂಜು ಸ್ಯಾಮ್ಸನ್ ದಾಖಲೆ ಒಂದು ಕಡೆಯಾದ್ರೆ. ಭಾರತ ಟಿ20 ಪಂದ್ಯದಲ್ಲಿ ಗರಿಷ್ಠ ರನ್ ಹೊಡೆದ ದಾಖಲೆಯೂ ಕೂಡ ಇದೆ ಪಂದ್ಯದಲ್ಲಾಗಿದೆ. ಅದರ ಜೊತೆ ಮತ್ತೊಂದು ದಾಖಲೆ ಅಂದ್ರೆ ಒಂದೇ ಪಂದ್ಯದಲ್ಲಿ ಅತಿಹೆಚ್ಚು ಬೌಂಡರಿಗಳನ್ನು ಹೊಡೆಯುವುದರಲ್ಲಿಯೂ ಟೀಂ ಇಂಡಿಯಾ ದಾಖಲೆ ಬರೆದಿದೆ.
ಟಿ20 ಇತಿಹಾಸದಲ್ಲಿಯೇ ಅತಿಹೆಚ್ಚು ಬೌಂಡರಿ ಕಲೆ ಹಾಕಿದ ಟೀಂ ಎಂಬ ದಾಖಲೆಯನ್ನು ಟೀಂ ಇಂಡಿಯಾ ಬರೆದಿದೆ. ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಒಟ್ಟು 47 ಬೌಂಡರಿಗಳನ್ನು ಟೀಂ ಇಂಡಿಯಾ ಹೊಡೆದಿದ್ದು ಇದು ಟಿ20 ಇತಿಹಾಸದಲ್ಲಿಯೇ ಅತಿ ಹೆಚ್ಚು ಬೌಂಡರಿ ಹೊಡೆದ ದೇಶ ಎಂದು ಭಾರತ ಗುರುತಿಸಿಕೊಂಡಿದೆ.